ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟುಹಿಡಿದು, ವಿಧಾನಮಂಡಲದ ಉಭಯ ಸದನಗಳಲ್ಲಿ ಕಲಾಪ ನಡೆಯದಂತೆ ಬಿಜೆಪಿ-ಜೆಡಿಎಸ್ ಜಂಟಿಯಾಗಿ ತಡೆದಿದ್ದವು. ಕೊನೆಗೆ ಕಲಾಪವನ್ನು ಅರ್ಧಕ್ಕೇ ಮೊಟಕುಗೊಳಿಸಲಾಯಿತು. ಅಷ್ಟಕ್ಕೆ ಸುಮ್ಮನಾಗದ ಬಿಜೆಪಿ, ನಾಗೇಂದ್ರ ವಜಾಗೆ ಆಗ್ರಹಿಸುವ ಜತೆಗೆ ಎಸ್‌ಟಿ ಮೀಸಲಾತಿ ಗೊಂದಲ, ಬರಗಾಲ ನಿರ್ವಹಣೆ, ಖಾಲಿ ಹುದ್ದೆಗಳ ಭರ್ತಿಯಲ್ಲಿ ವಿಳಂಬ, ಕೆಪಿಎಸ್‌ಸಿ ಹಗರಣ, ಬಿಡದಿ ಯೋಜನೆ ಹಾಗೂ ನೈಸ್ ಹಗರಣ ಸೇರಿದಂತೆ ಜ್ವಲಂತ ಸಮಸ್ಯೆಗಳ ವಿರುದ್ಧ ರಾಯಚೂರಿನಿಂದ ಬಳ್ಳಾರಿಯವರೆಗೆ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಲ್ನಡಿಗೆ ಜಾಥಾ ಘೋಷಿಸಿತ್ತು.