ವ್ಯಕ್ತಿಗಿಂತ ದೇಶ ಮುಖ್ಯ ಬಿಜೆಪಿ ಧ್ಯೇಯ

 ಆಳಂದನಲ್ಲಿ ಹಮ್ಮಿಕೊಂಡಿದ್ದ ಪ್ರಶಿಕ್ಷಣ ಮಹಾಭಿಯಾನ ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು. ಸುಭಾಷ ಗುತ್ತೇದಾರ್​, ಸುಭಾಷ ಬಗಲಿ, ಮಲ್ಲಿಕಾರ್ಜುನ ಕಂದಗೂಳೆ, ಹರ್ಷಾ ಗುತ್ತೇದಾರ್​ ಇತರರಿದ್ದರು.
ಆಳಂದನಲ್ಲಿ ಹಮ್ಮಿಕೊಂಡಿದ್ದ ಪ್ರಶಿಕ್ಷಣ ಮಹಾಭಿಯಾನ ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು. ಸುಭಾಷ ಗುತ್ತೇದಾರ್​, ಸುಭಾಷ ಬಗಲಿ, ಮಲ್ಲಿಕಾರ್ಜುನ ಕಂದಗೂಳೆ, ಹರ್ಷಾ ಗುತ್ತೇದಾರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಛಲವಾದಿ ನಾರಾಯಣಸ್ವಾಮಿ ಹೇಳಿಕೆ
  • ಆಳಂದನಲ್ಲಿ ಪ್ರಶಕ್ಷಿಣ ಅಭಿಯಾನ ಸಮಾರೋಪ
ಆಳಂದ: ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಸರಿಯಾದ ಸಮಯದಲ್ಲಿ ಸೂಕ್ತ ಸ್ಥಾನ ನೀಡಲಾಗುತ್ತದೆ. ಇಲ್ಲಿ ವ್ಯಕ್ತಿಗಿಂತ ದೇಶವೇ ಮೊದಲು ಎಂಬುದು ನಮ್ಮ ಪಾರ್ಟಿಯ ಧ್ಯೇಯವಾಗಿದೆ ಎಂದು ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಎಸ್​ಆರ್​ಜಿ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಂಡಿತ್​ ದೀನದಯಾಳ್​ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ, ಮಂಡಲ ಪ್ರಶಿಕ್ಷಣ ವರ್ಗ ಸಮಾರೋಪ ಹಾಗೂ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿ, ಪ್ರಶಿಕ್ಷಣ ಎನ್ನುವುದು ಭಾರತೀಯ ಜನತಾ ಪಾರ್ಟಿಯ ವಿಶೇಷತೆಯಾಗಿದ್ದು, ಇಲ್ಲಿ ಅನೇಕ ವಿಚಾರಗಳನ್ನು ಕಲಿಸಲಾಗುವುದು. ನೀತಿ, ಸಿದ್ಧಾಂತ, ಶಿಸ್ತು, ಜವಾಬ್ದಾರಿಗಳನ್ನು ಕಲಿಸಲಾಗುತ್ತದೆ. ಇದರಲ್ಲಿ ಪಾಲ್ಗೊಂಡವರು ಪಕ್ಷ ಸಂಟನೆಗಾಗಿ ಬೂತ್​ ಮಟ್ಟದಿಂದ ಕಾರ್ಯನಿರ್ವಹಿಸಬೇಕು ಎಂದರು.
1981ರಿಂದ ಹಿಡಿದು ಕಲ್ಯಾಣ ಕರ್ನಾಟಕಕ್ಕೆ ಬರುತ್ತಿದ್ದೇನೆ. ಇಲ್ಲಿವರೆಗೂ ಕಲ್ಯಾಣ ಮಾಡುವವರೇ ಸಿಗಲಿಲ್ಲ. ಶಿಕ್ಷಣ, ತಲಾ ಆದಾಯದಲ್ಲಿ ಕಲ್ಯಾಣ ಹಿಂದಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಿ ಕಳುಹಿಸಿದರೆ ಕಲ್ಯಾಣ ಕರ್ನಾಟಕ ಸಮಗ್ರ ಕಲ್ಯಾಣವಾಗುತ್ತದೆ. ಕಳೆದ ಬಾರಿ ಪಶ್ಚಿಮ ಬಂಗಾಳದಲ್ಲಿ 30 ಮುಸ್ಲಿಮರಿಗೆ ಬಿಜೆಪಿ ಟಿಕೆಟ್​ ನೀಡಿತ್ತು, ಆದರೆ ಬಹುತೇಕರು ಸೋಲನುಭವಿಸಿದರು. ಬಿಜೆಪಿಯನ್ನು ಮುಸ್ಲಿಂ ವಿರೋಧಿ ಎಂಬಂತೆ ಕಾಂಗ್ರೆಸ್​ ಬಿಂಬಿಸುತ್ತಿದೆ. ಆದರೆ ನಿಜವಾಗಿಯೂ ಕಾಂಗ್ರೆಸ್​ ಮುಸ್ಲಿಮರ ವಿರೋಧಿಯಾಗಿದ್ದು, ಸಮುದಾಯವನ್ನು ಕೇವಲ ವೋಟ್​ಗಾಗಿ ಬಳಸಿಕೊಳ್ಳುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಇತ್ತೀಚಿನ ದಾವಣಗೆರೆ ಉಪ ಚುನಾವಣೆಯಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಸುಭಾಷ ಗುತ್ತೇದಾರ್​ ಮಾತನಾಡಿ, ಕೆಸಿಪಿ, ಜೆಡಿಎಸ್​, ಕಾಂಗ್ರೆಸ್​ನಲ್ಲಿ ಹೋಗಿ ಬಂದಿದ್ದೇವೆ. ಆದರೆ ಬಿಜೆಪಿಗೆ ಬಂದಾಗ ಶಿಸ್ತು, ಸಂಯಮ, ದೇಶಭಕ್ತಿ, ಸಂಟನೆ ಕಲಿಸಲಾಗಿದೆ. ಪ್ರಶಿಕ್ಷಣ ಮಹಾಭಿಯಾನದಿಂದ ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಜವಾಬ್ದಾರಿ ಬಂದಿದೆ. ಶಾಸಕ ಬಿ.ಆರ್​.ಪಾಟೀಲ್​ ಅವರು ತಮ್ಮ ಸಂಸ್ಥೆಯಿಂದ ಅಭಿವೃದ್ಧಿ ಕೆಸಲ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ, ಹಾಗಾದರೆ ಸರ್ಕಾರ ಅನುದಾನ ಎಲ್ಲಿ ಹೋಯಿತು ? ಎಂದು ಪ್ರಶ್ನಿಸಿದರು.
ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಪ್ರಶಿಕ್ಷಣ ಮಂಡಲ ಸಂಚಾಲಕ ಹರ್ಷಾನಂದ ಗುತ್ತೇದಾರ್​, ವಿಭಾಗೀಯ ಸಹ ಪ್ರಭಾರಿ ಶರಣಪ್ಪ ತಳವಾರ ಮಾತನಾಡಿದರು. ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಶೋಭಾ ಭಾಣಿ, ಶಶಿಕಲಾ ಟೆಂಗಳಿ, ಬಸವರಾಜ ಬೆಣ್ಣೂರ, ಧರ್ಮಣ್ಣ ಇಟಗಾ, ಸಂಜಯ ಮಿಸ್ಕಿನ್​, ಗೌರಿ ಚಿಚಕೋಟಿ, ಸಹನಾ ಪಾಟೀಲ್​, ಸುರೇಶ ರಾಠೋಡ್​, ಬಸವರಾಜ ಬಿರಾದಾರ, ಶ್ರೀಶೈಲ ಪಾಟೀಲ್​ ಇತರರಿದ್ದರು. ಪ್ರಕಾಶ ಮಾನೆ ಸ್ವಾಗತಿಸಿದರು. ಸೀತಾರಾಮ ಜಮಾದಾರ ನಿರೂಪಣೆ ಮಾಡಿದರು. ಸುನೀಲ ಹಿರೋಳ್ಳಿಕರ್​ ವಂದಿಸಿದರು.
"

ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಅವರು ಇವಿಎಂ ಯಂತ್ರ ಜಾರಿಗೆ ತಂದರೂ ಅವರ ಮಗ ರಾಹುಲ್​ ಗಾಂಧಿ ಇವಿಎಂ ಬೇಡ ಎನ್ನುತ್ತಿದ್ದಾರೆ. 2023ರ ಚುನಾವಣೆಯಲ್ಲಿ ಶಾಸಕ ಬಿ.ಆರ್​.ಪಾಟೀಲ್​ ಅವರು ಇವಿಎಂನಿಂದ ಗೆದ್ದಿದ್ದು, ವೋಟ್​ ಚೋರಿ ಆಗಿದ್ದರೆ ಸುಭಾಷ ಗುತ್ತೇದಾರ್​ ಗೆಲ್ಲುತ್ತಿದ್ದರು. ನಿಜವಾಗಿಯೂ ವೋಟ್​ ಚೋರಿ ಮಾಡಿದ್ದು ಹಾಲಿ ಶಾಸಕರು, ಕಾಂಗ್ರೆಸ್​ ನಿರ್ನಾಮವಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ.

> ಛಲವಾದಿ ನಾರಾಯಣಸ್ವಾಮಿ,

ಪ್ರತಿಪಕ್ಷ ನಾಯಕ, ವಿಧಾನ ಪರಿಷತ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net