ಬಿಜೆಪಿ ಹೈವೋಲ್ಟೇಜ್ ಪಾದಯಾತ್ರೆ

ಪಾದಯಾತ್ರೆಯ ಭಿತ್ತಿಪತ್ರ (ಪೋಸ್ಟರ್) ಬಿಡುಗಡೆ
ಪಾದಯಾತ್ರೆಯ ಭಿತ್ತಿಪತ್ರ (ಪೋಸ್ಟರ್) ಬಿಡುಗಡೆ
Published on

ಬೆಂಗಳೂರು: ರಾಜ್ಯ ಸರ್ಕಾರದ ವೈಲ್ಯ ಬಿಚ್ಚಿಡಲು ಮತ್ತು ಸಾರ್ವಜನಿಕರ ಪರ ದನಿಯಾಗಲು ಬಿಜೆಪಿ ನಾಯಕರು ಕೈಗೊಂಡಿರುವ ಹೈವೋಲ್ಟೇಜ್ ಪಾದಯಾತ್ರೆಗೆ ಮಂಗಳವಾರ (ಸೆ.1) ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಚಾಲನೆ ಸಿಗಲಿದೆ. ಸೆ.10ಕ್ಕೆ ಬಳ್ಳಾರಿಯಲ್ಲಿ ಸಮಾರೋಪ ನಡೆಯಲಿದ್ದು, ಆರಂಭ ಮತ್ತು ಅಂತಿಮ ದಿನದಂದು ಕೇಂದ್ರ ಸಚಿವರು ಭಾಗವಹಿಸಲಿದ್ದಾರೆ.

ಅಂದಾಜು 190 ರಿಂದ 200 ಕಿ.ಮೀಟರ್ ಪಾದಯಾತ್ರೆಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಮಾಜಿ ಸಚಿವ ಶ್ರೀರಾಮುಲು ಸೇರಿ ಇನ್ನಿತರ ನಾಯಕರು ಇರಲಿದ್ದಾರೆ. ಇವರೊಂದಿಗೆ ಪ್ರತಿದಿನ ಕನಿಷ್ಠ 10 ಸಾವಿರ ಕಾರ್ಯಕರ್ತರು ಹೆಜ್ಜೆ ಹಾಕಲಿದ್ದಾರೆ. ಮೊದಲ ಮತ್ತು ಕೊನೆಯ ದಿವಸ 2.50 ಲಕ್ಷ ಜನರನ್ನು ಸೇರಿಸಲು ಬಿಜೆಪಿ ವೇದಿಕೆ ಸಜ್ಜು ಮಾಡಿಕೊಂಡಿದೆ. ಕಾಲ್ನಡಿಗೆ ಸಾಗುವ ಪ್ರಮುಖ ನಗರ, ಪಟ್ಟಣ ಮತ್ತು ಊರುಗಳಲ್ಲಿ ಸಣ್ಣ ಸಭಾ ಕಾರ್ಯಕ್ರಮಗಳು ನಡೆಯಲಿವೆ.
ಅದೇ ರೀತಿಯಾಗಿ ಪ್ರತಿ ದಿವಸ ಪಕ್ಷದ ವಿವಿಧ ನಾಯಕರನ್ನು ಪಾದಯಾತ್ರೆಯಲ್ಲಿ ಜೋಡಿಸಿಕೊಂಡು ಮತದಾರರನ್ನು ಸೆಳೆಯಲು ಮತ್ತು ಕಾರ್ಯಕರ್ತರನ್ನು ಉರಿದುಂಬಿಸಲು ಪ್ಲ್ಯಾನ್ ಮಾಡಲಾಗಿದೆ. ಇದರಿಂದ ಆಯಾ ಜಿಲ್ಲೆಯ ಮತ್ತು ಕ್ಷೇತ್ರ ನಾಯಕರನ್ನು ಯಾತ್ರೆಯಲ್ಲಿ ಜೋಡಿಸಿಕೊಂಡಂತೆ ಮತ್ತು ಅವರಿಗೂ ಹೆಚ್ಚಿನ ಪ್ರಚಾರ ಕೊಟ್ಟಂತೆ ಆಗಲಿದೆ. ಇದರೊಂದಿಗೆ ಸ್ಥಳೀಯ ವಿಷಯಗಳನ್ನು ಇಟ್ಟುಕೊಂಡು ಕಾರ್ಯಕ್ರಮ ರೂಪಿಸಲು ಈಗಾಗಲೇ ತಯಾರಿ ನಡೆದಿದ್ದು, ಸ್ಥಳೀಯರ ಗಮನ ಸೆಳೆಯುವ ಪ್ರಯತ್ನಗಳು ನಡೆಯಲಿವೆ. ಜತೆಗೆ ಸರ್ಕಾರದ ವಿರುದ್ಧದ ಹೋರಾಟಕ್ಕೆ ವಿಭಿನ್ನ ಸ್ವರೂಪ ಕೊಡುವ ಉದ್ದೇಶದಿಂದ ಪ್ರತಿ ದಿನ ಒಂದೊಂದು ವಿಷಯದ ಮೇಲೆ ಕಾರ್ಯಕ್ರಮ ರೂಪಿಸಲಾಗುತ್ತದೆ. ಒಂದು ದಿನ ಬರಗಾಲ, ಮತ್ತೊಂದು ದಿನ ಕೆಪಿಎಸ್‌ಸಿ ಅಕ್ರಮ, ದಲಿತರ ಹಣ ಲೂಟಿ,
ಕೊಪ್ಪಳದಲ್ಲಿ ಸಮಾನಾಂತರ ಜಲಾಶಯ ನಿರ್ಮಾಣ, 2.50 ಲಕ್ಷ ಉದ್ಯೋಗ ಭರ್ತಿಯಲ್ಲಿ ವಿಲ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಲ್ಯ... ಹೀಗೆ 9 ದಿನಗಳು ಒಂದೊಂದು ವಿಷಯ ಪ್ರಸ್ತಾಪ ಮಾಡಿ ಜನರ ಗಮನ ಸೆಳೆಯಲಾಗುತ್ತದೆ. ಜತೆಗೆ ಸರ್ಕಾರದ ವಿರುದ್ಧ ಸಮರ ಸಾರಲು ಬಿಜೆಪಿ ನಾಯಕರು ಕಾರ್ಯತಂತ್ರ ರೂಪಿಸಿದ್ದಾರೆ. ಇದಕ್ಕಾಗಿ ಬಿಜೆಪಿಯ ವಿವಿಧ ಘಟಕಗಳಿಗೆ ಒಂದೊಂದು ದಿನದ ಜವಾಬ್ದಾರಿ ವಹಿಸಿದ್ದು, ಆ ದಿನದ ಕಾರ್ಯಕ್ರಮ ರೂಪಿಸಬೇಕಿದೆ ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.

ಸಕಲ ವ್ಯವಸ್ಥೆ

ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಲು ವಿಶೇಷ ಘಟಕಗಳನ್ನು ತೆರೆಯಲಾಗಿದೆ. ಊಟ, ವಸತಿ, ಆರೋಗ್ಯ, ಸ್ವಚ್ಛತೆ ಹೀಗೆ ಪ್ರತಿಯೊಂದು ವ್ಯವಸ್ಥೆಗೂ ಪ್ರತ್ಯೇಕ ತಂಡ ರೂಪಿಸಿದ್ದು, ಈಗಾಗಲೇ ಅವರವರ ಕೆಲಸದಲ್ಲಿ ತೊಡಗಿಕೊಂಡಿವೆ.

ಪ್ರಸ್ತಾಪಿಸುವ ವಿಷಯಗಳು

- ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವಾಪಸ್ ನೀಡಬೇಕು
- ವೈಜ್ಞಾನಿಕವಾಗಿ ಬರಗಾಲ ೋಷಣೆ, ಮತ್ತಷ್ಟು ತಾಲೂಕು ಸೇರಿಸಬೇಕು
- ರೈತರ ಸಾಲಮನ್ನಾ, ಪ್ರತಿ ತಾಲೂಕಿಗೆ ಹೆಚ್ಚಿನ ಅನುದಾನ ಬಿಡುಗಡೆ
- ಎಸ್‌ಟಿ ಮೀಸಲಾತಿಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಬೇಕು
- ಮಹಿಳಾ ಮಸೂದೆಗೆ ಕಾಂಗ್ರೆಸ್ ವಿರೋಧ, ಕ್ಯಾಬಿನೆಟ್‌ನಲ್ಲೂ ಸಿಕ್ಕಿಲ್ಲ ಅವಕಾಶ
- 2.50 ಲಕ್ಷ ಉದ್ಯೋಗ ನೇಮಕಾತಿಗೆ ಆಗ್ರಹ
- ಕೆಪಿಎಸ್‌ಸಿ ನೇಮಕಾತಿಯಲ್ಲಿ ಅಕ್ರಮ, ಪಶುವೈದ್ಯಾಧಿಕಾರಿಗಳ ಹಗರಣ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net