ಅಧಿಕಾರಕ್ಕಾಗಿ ಬಿಜೆಪಿ ಸಂಚು / SULIBELE

ಸೂಲಿಬೆಲೆಯಲ್ಲಿ ಹಮ್ಮಿಕೊಂಡಿದ್ದ ಎಸ್​ಐಆರ್​ ಜಾಗೃತಿ ಅಭಿಯಾನಕ್ಕೆ ಸಚಿವ ಮುನಿಯಪ್ಪ, ಶಾಸಕ ಶರತ್​ ಬಚ್ಚೇಗೌಡ ಚಾಲನೆ ನೀಡಿದರು. ಸಹಕಾರ ಬ್ಯಾಂಕ್​ ಅಧ್ಯಕ್ಷ ಬಿ.ವಿ.ಸತೀಶಗೌಡ, ಯುವ ಮುಖಂಡ ನಾರಾಯಣಗೌಡ, ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಎಂ.ಬಿ.ವೆಂಕಟೇಶ್​, ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ ಇತರರಿದ್ದರು.
ಸೂಲಿಬೆಲೆಯಲ್ಲಿ ಹಮ್ಮಿಕೊಂಡಿದ್ದ ಎಸ್​ಐಆರ್​ ಜಾಗೃತಿ ಅಭಿಯಾನಕ್ಕೆ ಸಚಿವ ಮುನಿಯಪ್ಪ, ಶಾಸಕ ಶರತ್​ ಬಚ್ಚೇಗೌಡ ಚಾಲನೆ ನೀಡಿದರು. ಸಹಕಾರ ಬ್ಯಾಂಕ್​ ಅಧ್ಯಕ್ಷ ಬಿ.ವಿ.ಸತೀಶಗೌಡ, ಯುವ ಮುಖಂಡ ನಾರಾಯಣಗೌಡ, ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಎಂ.ಬಿ.ವೆಂಕಟೇಶ್​, ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ ಇತರರಿದ್ದರು.
Published on
ಸೂಲಿಬೆಲೆ : ವಾಮವಾರ್ಗದಿಂದ ಅಧಿಕಾರ ಹಿಡಿಯುವ ಹುನ್ನಾರ ಬಿಜೆಪಿ ನಡೆಸುತ್ತಿದ್ದು, ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಮತದಾರರು ಹಾಗೂ ಕಾರ್ಯಕರ್ತರು ಎಚ್ಚರದಿಂದಿರಬೇಕು ಎಂದು ಸಚಿವ ಕೆ.ಎಚ್​.ಮುನಿಯಪ್ಪ ಎಚ್ಚರಿಕೆ ನೀಡಿದರು.
ಬೆಂಡಿಗಾನಹಳ್ಳಿ ಚೌಡೇಶ್ವರಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಹೋಬಳಿಮಟ್ಟದ ಮತದಾರ ಪಟ್ಟಿ ಪರಿಷ್ಕರಣೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಹಾರ ಮತ್ತು ಪಶ್ವಿಮಬಂಗಾಳ ರಾಜ್ಯಗಳಲ್ಲಿ ಸುಮಾರು 93 ಲಕ್ಷ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಕಾಂಗ್ರೆಸ್​ಪರ ಇರುವ ಮತಗಳನ್ನು ತೆಗೆದುಹಾಕಿ ಅಧಿಕಾರ ಹಿಡಿಯುವ ಕುತಂತ್ರ ಬುದ್ಧಿ ಬಿಜೆಪಿಗಿದೆ. ಹಾಗಾಗಿ ಬಿಎಲ್​ಒಗಳು ಗ್ರಾಮದ ಬೂತ್​, ವಾರ್ಡ್​ಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದರು.
ಶಾಸಕ ಶರತ್​ ಬಚ್ಚೇಗೌಡ ಮಾತನಾಡಿ, ಕೇಂದ್ರ ಸರ್ಕಾರವು ವ್ಯವಸ್ಥಿತ ಮತಗಳ ಡಿಲೀಟ್​ ಮಾಡುವ ಪಿತೂರಿ ನಡೆಸುತ್ತಿದೆ. ಬಿಹಾರ ಮತ್ತು ಪಶ್ವಿಮಬಂಗಾಳದಂತೆ ರಾಜ್ಯದಲ್ಲೂ ಮತದಾರರ ಪಟ್ಟಿಯಿಂದ ಹೆಸರು ತೆಗೆದರೆ ಸರ್ಕಾರದ ಯಾವುದೇ ಸವಲತ್ತುಗಳು ಸಿಗುವುದಿಲ್ಲ. ಜಿಲ್ಲೆಯಲ್ಲಿ 9.12 ಲಕ್ಷ ಮತದಾರರಿದ್ದು, ಶೇ.99.67 ಅರ್ಜಿ ವಿತರಣೆಯಾಗಿದೆ. 4.93 ಸಾವಿರದ 893 ಮತಗಳನ್ನು ಡಿಜಿಟಲ್​ ದಾಖಲೆ ಮಾಡಲಾಗಿದ್ದು, ಅರ್ಜಿ ವಿತರಣೆಯಲ್ಲಿ ಶೇ.100 ಹಾಗೂ ಶೇ.75 ಡಿಜಿಟಲ್​ ದಾಖಲೆ ಮಾಡಲಾಗಿದೆ. ಈ ಬಗ್ಗೆ ಕಾರ್ಯಕರ್ತರು ಮತ್ತು ಮತದಾರರು ಜಾಗೃತರಾಗಿರಬೇಕು ಎಂದರು.
ಭಾರತ ಚುನಾವಣಾ ಆಯೋಗವು 1 ತಿಂಗಳು ಎಸ್​ಐಆರ್​ಗೆ ಅವಕಾಶ ನೀಡಿದ್ದು, ಈ ಬಗ್ಗೆ ಸ್ಥಳಿಯ ಮುಖಂಡರು ಗ್ರಾಮಗಳು, ವಾರ್ಡ್​ ಹಾಗೂ ಬೂತ್​ಗಳಲ್ಲಿ ಮತದಾರರ ಮಾಹಿತಿ ಸಂಗ್ರಹಿಸಿ ಮತ ಉಳಿಸುವ ಬಗ್ಗೆ ಗಮನಹರಿಸಬೇಕು ಎಂದರು.
15ನೇ ಹಣಕಾಸು ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಎಸ್​ಐಆರ್​ನಲ್ಲಿ ದಾಖಲೆ ಸಲ್ಲಿಸಿ ಮತ ಉಳಿಸಿಕೊಳ್ಳಬೇಕು. 13 ರಾಜ್ಯಗಳಲ್ಲಿ 6 ಕೋಟಿ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದರು. ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ರಾಜಣ್ಣ, ನಗರೇನಹಳ್ಳಿ ನಾಗರಾಜಪ್ಪ, ಡಾ.ಡಿ.ಟಿ.ವೆಂಕಟೇಶ್​, ಬ್ಲಾಕ್​ ಕಾಂಗ್ರೇಸ್​ ಅಧ್ಯಕ್ಷ ಅಕ್ಬರ್​ ಅಲಿಖಾನ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net