ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಬೆಳಗಾವಿಲಿ ಬಿಜೆಪಿ ಪ್ರತಿಭಟನೆ
ಬೆಳಗಾವಿಲಿ ಬಿಜೆಪಿ ಪ್ರತಿಭಟನೆ
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
  • ಬೆಳಗಾವಿ ಬಾರಕೋಲ ಹಿಡಿದು ಪ್ರತಿಭಟನೆ
  • ರೈತರ ಕಷ್ಟಕ್ಕೆ ಸರ್ಕಾರ ಸ್ಪಂದಿಸುವಂತೆ ಒತ್ತಾಯ

ಬರ ಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಒತ್ತಾಯ
| ಬಾರಕೋಲ ಹಿಡಿದು ಬಿಜೆಪಿ ಪ್ರತಿಭಟನೆ | ಸಾಲಮನ್ನಾ ಜಾರಿ ಮಾಡುವಂತೆ ಆಗ್ರಹ
ವಿಜಯವಾಣಿ ಸುದ್ದಿಜಾಲ ಬೆಳಗಾವಿ:

ಮುಂಗಾರು ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಸೋಮವಾರ ಬಿಜೆಪಿ ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಎತ್ತುಗಳ ಸಹಿತ ಬಾರಕೋಲ ಹಿಡಿದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ರೈತಪರ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ತಕ್ಷಣ ಮರು ಪ್ರಾರಂಭಿಸಬೇಕು, ರೈತರಿಗೆ ನಿರಂತರ ವಿದ್ಯುತ್ ಪೂರೈಸಬೇಕು, ಲೋಡ್ ಶೆಡ್ಡಿಂಗ್ ಮಾಡಬಾರದು, ಮಳೆಯಾಗದೆ ಬೆಳೆ ಹಾನಿಯಾದ ರೈತರಿಗೆ ಪರಿಹಾರ, ಕಳಪೆ ಬೀಜ ಮತ್ತು ಗೊಬ್ಬರ ವಿತರಣೆಯಾಗದಂತೆ ಕ್ರಮವಹಿಸಬೇಕು, ಸಾಲಮನ್ನಾ ಜಾರಿ ಮಾಡಬೇಕು ಪ್ರತಿಭಟನಾಕಾರರು ಭಾಗವಹಿಸಿದರು.
ಜಿಲ್ಲೆಯ ಕೆರೆಗಳ ಹೂಳು ಎತ್ತುವುದರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ, ಬರ ನಿರ್ವಹಣೆ ವಿಫಲವಾಗಿದೆ, ಗ್ಯಾರಂಟಿ ಯೋಜನೆ ಹೆಸರಿನಲ್ಲಿದೆ ಸರ್ಕಾರ ಸಂಪೂರ್ಣವಾಗಿ ಅಭಿವೃದ್ದಿ ಮರೆತಿದೆ ಎಂದು ಬಿಜೆಪಿ ಪ್ರಮುಖ ಆರೋಪಿಸಿದರು.
ಸರ್ಕಾರ ಎಚ್ಚತ್ತುಕೊಂಡು ರೈತರ ಕಷ್ಟಕ್ಕೆ ಸ್ಪಂದಿಸಬೇಕು, ಪರ್ಯಾಯ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಮೂಲಕ ರೈತರಿಗೆ ಬೆಳೆ ಬೀಜಗಳು , ಗೊಬ್ಬರ, ಬೆಳೆ ವಿಮೆ, ಬ್ಯಾಂಕ್ ತೆರೆಯುವುದು ಹಾಗೂ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೊಳಿಸುವಂತೆ ಮನವಿ ಮೂಲಕ ಒತ್ತಾಯಿಸಿದರು.
ಶಾಸಕ ವಿಠ್ಠಲ ಹಲಗೇಕರ್,ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ನಗರಾಧ್ಯಕ್ಷೆ ಗೀತಾ ಸುತಾರ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜಗದೀಶ ಬೂದಿಹಾಳ,ವಿ.ಪ. ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಸಂಜಯ ಪಾಟೀಲ, ಡಾ.ಸೋನಾಲಿ ಸರ್ನೋಬತ್, ಮುರಘೇಂದ್ರಗೌಡ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net