ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮೆಟ್ರೋ‌ ಪ್ರಯಾಣ : ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ

,
,
Published on
ಕಲಬುರಗಿ : ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ ಮೆಟ್ರೋ ಹತ್ತಿರುವ ಬಗ್ಗೆ ಮಾದ್ಯಮ ಗಳು ಪದೇ ಪದೇ ಸುದ್ದಿ ಬಿತ್ತರಿಸುತ್ತಿವೆ. ಆದರೆ,‌ಈ ಪರಿಸ್ಥಿತಿಗೆ ಯಾರು ಕಾರಣ ಎಂದು ಯಾಕೆ ಕೇಳುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು‌ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಚಿತ್ತಾಪುರ ಕ್ಷೇತ್ರದ ಮಾಡಬೂಳ ಗ್ರಾಮದ ಬಳಿ ನಿರ್ಮಾಣವಾಗಿರುವ ನೂತನ ಕಲಬುರಗಿ ಮೃಗಾಲಯ ಉದ್ಘಾಟನೆ ನೆರವೇರಿಸಿದ‌ ನಂತರದ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡಿ, ತೈಲ ಮತ್ತು ಅನಿಲ ಕೊರತೆಗೆ ಕಾರಣ ಕೇಂದ್ರದ ಸಡಿಲ ವಿದೇಶಿ ನೀತಿಗಳು ಎಂದು ಜರಿದರು.
ದೇಶ ಕಷ್ಟದ ಸ್ಥಿತಿಯಲ್ಲಿದ್ದಾಗ ಮೋದಿ ವಿದೇಶಕ್ಕೆ ಹೋಗುತ್ತಾರೆ. ಆರ್ಥಿಕ‌ ಸ್ಥಿತಿಗತಿ, ಪೆಟ್ರೊಲಿಯಂ ಬೆಲೆ ಏರಿಕೆ ಬಗ್ಗೆ ಸಂಸತ್ತಿನಲ್ಲೇ ಹೇಳಬೇಕಿತ್ತು‌ ನೆದರ್ ಲ್ಯಾಂಡ್ಸ್ ಗೆ ಯಾಕೆ‌ ಹೋಗಬೇಕಿತ್ತು ಎಂದು‌ ಖರ್ಗೆ ಕುಟುಕಿದರು.
ಬೆಲೆ ಏರಿಕೆ ವಿಷಯ ಮರೆಮಾಚಲು ಮೋದಿ ಚಿನ್ನ ಖರೀದಿ ಮಾಡಬೇಡಿ ಎಂದು ಜನರಿಗೆ ಕರೆ ಕೊಡುತ್ತಾರೆ. ನೀಟ್ ಅಕ್ರಮ ಬಗ್ಗೆ ಯಾಕೆ ಮಾತನಾಡುವುದಿಲ್ಲ. 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ಇದಕ್ಕೆ‌ಯಾರು ಕಾರಣ? ಸಚಿವ ಧರ್ಮೆಂದ್ರ ಪ್ರಧಾನ್ ಅವರನ್ನ ಇನ್ನೂ‌ ಸಚಿವರಾಗಿ ಮುಂದುವರೆಸಿದ್ದಾರೆ‌ ಯಾಕೆ? ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರಶ್ನಿಸಿದರು.
ಪ್ರಧಾನಿ ಮೋದಿ ವಿದೇಶದಿಂದ ತಂದ ಪ್ರಾಣಿಗಳು ಸತ್ತು ಹೋದವು. ಈಗ ನಾವು ತರುವ ಪ್ರಾಣಿಗಳನ್ನು ಸರಿಯಾಗಿ‌ ನಿರ್ವಹಣೆ ಮಾಡಿ ಸಂರಕ್ಷಿಸಲಾಗುವುದು ಎಂದು ಪ್ರಿಯಾಂಕ್ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net