ದೇವನಹಳ್ಳಿಯಲ್ಲಿ ಬಿಜೆಪಿ ಪ್ರತಿಭಟನೆ / DEVANAHALLI

ದೇವನಹಳ್ಳಿಯ ಆಡಳಿತಸೌಧದ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ತಹಸೀಲ್ದಾರ್​ ಅನಿಲ್​ಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ತಾಲೂಕು ಅಧ್ಯಕ್ಷ ಅಂಬರೀಶಗೌಡ, ಬಿಜೆಪಿ ಮುಖಂಡರಾದ ದೇ.ಸು.ನಾಗಾರಾಜ್​, ಬಿ.ಕೆ.ನಾರಾಯಣಸ್ವಾಮಿ, ಆನಂದ್​ ಗೌಡ, ದಾಸ, ಎಸ್​ಟಿ, ಎಸ್​ಸಿ ಮೋರ್ಚಾ ಅಧ್ಯಕ್ಷ ನಾಗೇಶ್​ ಬಾಬು ಇದ್ದರು.
ದೇವನಹಳ್ಳಿಯ ಆಡಳಿತಸೌಧದ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ತಹಸೀಲ್ದಾರ್​ ಅನಿಲ್​ಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ತಾಲೂಕು ಅಧ್ಯಕ್ಷ ಅಂಬರೀಶಗೌಡ, ಬಿಜೆಪಿ ಮುಖಂಡರಾದ ದೇ.ಸು.ನಾಗಾರಾಜ್​, ಬಿ.ಕೆ.ನಾರಾಯಣಸ್ವಾಮಿ, ಆನಂದ್​ ಗೌಡ, ದಾಸ, ಎಸ್​ಟಿ, ಎಸ್​ಸಿ ಮೋರ್ಚಾ ಅಧ್ಯಕ್ಷ ನಾಗೇಶ್​ ಬಾಬು ಇದ್ದರು.
Published on
ದೇವನಹಳ್ಳಿ : ಕಾಂಗ್ರೆಸ್​ ಸರ್ಕಾರ ಅನುಷ್ಠಾನಕ್ಕೆ ತರುತ್ತಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ -2025 ವಿರೋಧಿಸಿ ದೇವನಹಳ್ಳಿಯ ಆಡಳಿತಸೌಧದ ಮುಂಭಾಗದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್​ ಎಂ.ಅನಿಲ್​ಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎನ್​.ಎಲ್​.ಅಂಬರೀಶ್​ಗೌಡ ಮಾತನಾಡಿ, ಸರ್ಕಾರ ನಾಗರಿಕರ ಮೂಲ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ. ರಾಜಕೀಯ ಸೇಡು ತೀರಿಸಿಕೊಳ್ಳಲು ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ -2025 ಅನ್ನು ರಾಜ್ಯ ಸರ್ಕಾರ ತಂದಿದೆ. ದ್ವೇಷ ಭಾಷಣ ಮೊದಲಾದ ಅಪರಾಧಗಳಿಗೆ ಕಡಿವಾಣ ಹಾಕಲು ನಮ್ಮಲ್ಲಿ ಸಾಕಷ್ಟು ಕಾನೂನುಗಳಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದು ಪ್ರಜಾಪ್ರಭುತ್ವದ ಮೂಲತತ್ವಕ್ಕೆ ಹಾನಿ. ಈ ಕಾನೂನು ಪೊಲೀಸರಿಗೆ ಮತ್ತು ಸರ್ಕಾರಕ್ಕೆ ನಿರಂಕುಶ ಅಧಿಕಾರ ನೀಡುತ್ತದೆ. ಕಾಯ್ದೆ ಹೇಳುವಂತೆ ಈ ಅಪರಾಧಕ್ಕೆ ಜಾಮೀನು ಇಲ್ಲ ಎಂದು ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ರಾಜ್ಯದಲ್ಲಿ ರಸ್ತೆ ಗುಂಡಿ ಮುಚ್ಚದೆ ಕೇವಲ ಅವರ ಗ್ಯಾರಂಟಿ ಯೋಜನೆಗಳನ್ನು ನೀಡುವುದರಲ್ಲಿ ನಿರತರಾಗಿದ್ದಾರೆ. ಈ ಕಾಯ್ದೆ ಪಕ್ಷಕ್ಕೆ ಸಂಬಂಧಿಸಿಲ್ಲ. ಪ್ರಜೆಗಳಿಗೂ ಅನ್ವಯವಾಗುತ್ತದೆ ಎಂದು ಹೇಳಿದರು.
ಕುಂದಾಣ ಯುವ ಮೋರ್ಚಾ ಅಧ್ಯಕ್ಷ ಅರುವನಹಳ್ಳಿ ವೆಂಕಟೇಗೌಡ, ನವೀನ್​ಕುಮಾರ್​, ರಾಮ್​ ಭಗವಾನ್​, ಭಾಗ್ಯಮ್ಮ, ಜಗದೀಶ್​, ನವೀನ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net