ಕಾಂಗ್ರೆಸ್ಸಿನ ದ್ವಂದ್ವ ನೀತಿ ಬಗ್ಗೆ ಬಿಜೆಪಿ ಆಕ್ರೋಶ ಇಬ್ಬರು ಸದಸ್ಯರ ಅಮಾನತು, ಸಚಿವರ ವಜಾಕ್ಕೆ ಆಗ್ರಹ
ಛಲವಾದಿ ನಾರಾಯಣಸ್ವಾಮಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಭಾಷಣವನ್ನೇ ಮಾಡಿಲ್ಲವೆಂದ ಮೇಲೆ ನೀವು ಭಾಷಣದ ಮೇಲೆ ವಂದನಾ ನಿರ್ಣಯ ಹೇಗೆ ಸ್ವೀಕರಿಸಲು ಸಾಧ್ಯ
ನೀವು ರಾಷ್ಟ್ರಗೀತೆಯನ್ನು ಹಾಡಲೇ ಇಲ್ಲ. ಹಾಗಿದ್ದರೆ ಅಪಮಾನ ಆಗುವುದು ಹೇಗೆ?
ಬೆಂಗಳೂರು:
ರಾಜ್ಯಪಾಲರನ್ನು ಅಡ್ಡಗಟ್ಟಿ ಅಗೌರವ ತೋರಿಸಿದ ಸದನ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಮತ್ತು ಎಸ್.ರವಿ ಅವರನ್ನು ಅಮಾನತ್ತು ಮಾಡುವಂತೆ ಮತ್ತು ಸಚಿವ ತಿಮ್ಮಾಪುರ ಅವರ ವಜಾಕ್ಕೆ ಹೋರಾಟ ಮಾಡಿದ್ದೇವೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ತಿಮ್ಮಾಪುರ ಅವರ ವಜಾಕ್ಕೆ ನಿಲುವಳಿ ಸೂಚನೆ ಮಂಡಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು ರಾಜ್ಯಪಾಲರು ಭಾಷಣವನ್ನೇ ಮಾಡಿಲ್ಲವೆಂದು ಹೇಳುತ್ತಾರೆ. ಭಾಷಣವನ್ನೇ ಮಾಡಿಲ್ಲವೆಂದ ಮೇಲೆ ನೀವು ಭಾಷಣದ ಮೇಲೆ ವಂದನಾ ನಿರ್ಣಯ ಹೇಗೆ ಸ್ವೀಕರಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಮೊದಲ ಸಾಲು ಮತ್ತು ಕೊನೆಯ ಸಾಲನ್ನು ಹೇಳಿದ ಮೇಲೆ ಅದು ಓದಿದ ಹಾಗಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದ್ದರಿಂದ ನಾವು ಅದರ ಮೇಲೆ ವಂದನಾ ನಿರ್ಣಯ ಸ್ವೀಕರಿಸಬಹುದು ಎಂದಿರುವುದು ಸರ್ಕಾರದ ದ್ವಂದ್ವ ನೀತಿ ಎಂದು ಟೀಕಿಸಿದರು.
ಮೊದಲು ರಾಷ್ಟ್ರಗೀತೆ ಹಾಡಿದಾಗ ನಾವು, ಅವರು ಸೇರಿ ಎಲ್ಲರೂ ಗೌರವ ಕೊಟ್ಟಿದ್ದೇವೆ. ಭಾಷಣ ಮುಗಿಸಿ ಹೋಗುವಾಗ ನೀವು ರಾಷ್ಟ್ರಗೀತೆಯನ್ನು ಹಾಡಲೇ ಇಲ್ಲ. ಹಾಗಿದ್ದರೆ ಅಪಮಾನ ಆಗುವುದು ಹೇಗೆ? ಇದು ಕಾಂಗ್ರೆಸ್ಸಿನ ದ್ವಂದ್ವ ನೀತಿ ಮತ್ತು ಅವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮಾಡಿದ್ದು ಎಂದು ಟೀಕಿಸಿದರು.
ಹರಿಪ್ರಸಾದ್ ಅವರು ಮಾನ್ಯ ರಾಜ್ಯಪಾಲರನ್ನು ಅಡ್ಡಗಟ್ಟಿ ಅವರನ್ನು ಥಳಿಸಿಯೇ ಬಿಡುತ್ತಾರೇನೋ ಎಂಬ ಪರಿಸ್ಥಿತಿ ಉದ್ಭವವಾಗಿತ್ತು. ಬಿಜೆಪಿಯವರೆಲ್ಲ ಸೇರಿ ನನ್ನ ಬಟ್ಟೆ ಹರಿದಿದ್ದಾರೆ ಎಂದಿರುವುದು ಕ್ಷುಲ್ಲಕ ವಿಷಯ. ಅವರ ಬಟ್ಟೆಯನ್ನು ಅವರೇ ಹರಿದುಕೊಂಡು ಪ್ರಚಾರ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದ್ದರು. ಅದನ್ನು ನಾವು ಇವತ್ತು ಬಯಲು ಮಾಡಿದ್ದೇವೆ ಎಂದರು.
*ರಾಜ್ಯಪಾಲರ ಮೇಲೆ ಕ್ರಮ ಜರುಗಿಸಲು ಇಲ್ಲಿ ಯಾರಿಗೂ ಅಧಿಕಾರವಿಲ್ಲ. ಅದನ್ನು ಪ್ರಶ್ನಿಸಿದ ಬಳಿಕ ಸಭಾಪತಿಗಳು ಅವರ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಇದು ನಮ್ಮ ಹೋರಾಟಕ್ಕೆ ಸಿಕ್ಕಿದ ಜಯ