ನೀಟ್ ಪರೀೆ ವೈಫಲ್ಯ ಮತ್ತು ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ದೊಡ್ಡಬಳ್ಳಾಪುರ ತಾಲೂಕು ಕಚೇರಿ ಮುಂದೆ ಕನ್ನಡ ಜಾಗೃತಿ ಪರಿಷತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪರಿಷತ್ ಅಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಡಿಪಿ ಆಂಜನೇಯ, ಹೋರಾಟಗಾರರಾದ ಸತ್ಯನಾರಾಯಣ, ಆವಲಮೂರ್ತಿ, ಪ್ರಮೀಳಾ ಮಹದೇವ, ಮುನಿಪಾಪಯ್ಯ, ವೆಂಕಟೇಶ್, ರೈತ ಸಂದ ಜಿಲ್ಲಾಧ್ಯಕ್ಷ ಪ್ರಸನ್ನ, ಮುತ್ತೇಗೌಡ ಇದ್ದರು.
ದೊಡ್ಡಬಳ್ಳಾಪುರ : ನೀಟ್ ಪರೀೆಯ ವೈಫಲ್ಯ ಮತ್ತು ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲಿನ ಹಲ್ಲೆಗೆ ಖಂಡಿಸಿ "ಪ್ರಜಾಪ್ರಭುತ್ವದ ಮೇಲಿನ ದಾಳಿಯನ್ನು ಮೆಟ್ಟಿ ನಿಲ್ಲೋಣ, ಜನತಾದ್ರೋಹಿಗಳಿಗೆ ಛೀ ಥೂ ಉಗಿಯೋಣ' ಎಂಬ ೂಷವಾಕ್ಯದೊಂದಿಗೆ ಕನ್ನಡ ಜಾಗೃತಿ ಪರಿಷತ್ ನೇತೃತ್ವದಲ್ಲಿ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕನ್ನಡ ಪಕ್ಷ ಮುಖಂಡ ಸಂಜೀವ್ ನಾಯಕ್ ಮಾತನಾಡಿ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಲ್ಲಿಟ್ಟು, 20ಕ್ಕೂ ಹೆಚ್ಚು ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಲಾಂತರ ವಿದ್ಯಾರ್ಥಿಗಳು ಕಾಕ್ರೋಜ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ಜಂತರ್&ಮಂತರ್ ಅಂಗಳದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆದರೂ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ದೌರ್ಜನ್ಯದಲ್ಲಿ ಸಾವಿರಾರು ವಿದ್ಯಾರ್ಥಿಗಳ ಕೈ, ಕಾಲು ಮುರಿದಿದೆ, ತಲೆಗೆ ಬಲವಾದ ಪೆಟ್ಟುಗಳಾಗಿವೆ. ನೂರಾರು ಜನ ಆಸ್ಪತ್ರೆ ಸೇರಿದ್ದಾರೆ. ಮಹಿಳಾ ಹೋರಾಟಗಾರ್ತಿಯರ ಮೇಲೆ ಪುರುಷ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಪೊಲೀಸರ ವೇಷದಲ್ಲಿದ್ದ ಗೂಂಡಾಗಳು ಅಸಭ್ಯವಾಗಿ ವರ್ತಿಸಿದ್ದಾರೆ. ಟನೆ ಬಗ್ಗೆ ವರದಿ ಮಾಡುತ್ತಿದ್ದ ನೈಜ ಪತ್ರಕರ್ತರ ಹೊಟ್ಟೆಗೆ ಒದ್ದು, ಕೈ ಮೂಳೆ ಮುರಿದಿದ್ದಾರೆ. ಕ್ಯಾಮರಾಗಳನ್ನೂ ನಾಶಪಡಿಸಿದ್ದಾರೆ. ರಕ್ತದೋಕುಳಿಯಲ್ಲೇ ರಾಜಕಾರಣ ಮಾಡುತ್ತಿರುವ ಬಿಜೆಪಿಯಿಂದ ಎಂತಹ ಆಡಳಿತ ನಿರೀಸಲು ಸಾಧ್ಯ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಜಾಗೃತಿ ಪರಿಷತ್ ಟ್ರಸ್ಟಿ ಮಹಾಬಲೇಶ್ವರ್ ಮಾತನಾಡಿ, ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀೆಗಳನ್ನು ನಡೆಸುವ ಕೆಪಿಎಸ್ಸಿ ಸಹ ಭ್ರಷ್ಟಾಚಾರದಿಂದ ಕೂಡಿದೆ. ಯುವಕರಿಗೆ ರಾಜ್ಯ, ರಾಷ್ಟ್ರದಲ್ಲಿ ಸಾಕಷ್ಟು ಅನ್ಯಾಯವಾಗುತ್ತಿದೆ. ಎಲ್ಲೆಡೆಯೂ ಭ್ರಷ್ಟಾಚಾರ ತುಂಬಿದೆ. ಇದನ್ನು ಕೂಡಲೇ ಸರಿಪಡಿಸುವ ಮೂಲಕ ದೇಶದ ಭವಿಷ್ಯ ರಸಬೇಕು ಎಂದರು.