ಬಯೋಮೆಟ್ರಿಕ್​ ಹಾಜರಾತಿ ದುರ್ಬಳಕೆ

ಸಿದ್ದು ನಾಯಕ
ಸಿದ್ದು ನಾಯಕ
Published on

ಪ್ರಮುಖ ಮುಖ್ಯಾಂಶಗಳು

  • ಕರವೇ ಕಾರ್ಯದರ್ಶಿ ಸಿದ್ದು ನಾಯಕ ಆರೋಪ
  • ವಾರ್ಡನ್​-ಅಧಿಕಾರಿಗಳು ಶಾಮೀಲು
ಯಾದಗಿರಿ: ಗುರುಮಠಕಲ್​ ಮತೇತ್ರ ವ್ಯಾಪ್ತಿಯಲ್ಲಿ ಬರುವ ಪಜಾ ಮತ್ತು ಪಪಂ ವಸತಿ ನಿಲಯಗಳಲ್ಲಿ ಬಯೋಮೆಟ್ರಿಕ್​ ಹಾಜರಾತಿ ಇದ್ದರೂ ಅದರ ಸದ್ಬಳಕೆಯಾಗದೆ ವಾರ್ಡನ್​ಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಇದರಲ್ಲಿ ತಾಲೂಕು ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಮೀಲಾಗಿದ್ದಾರೆ ಎಂದು ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ ಆರೋಪಿಸಿದ್ದಾರೆ.
ಪ್ರತಿ ವಸತಿ ನಿಲಯಗಳಲ್ಲಿರುವ ಎಲ್ಲ ಮಕ್ಕಳಿಗಿಂತಲೂ ಸರ್ಕಾರ ನಿಗದಿಪಡಿಸಿದ ಸಂಖ್ಯೆಯ ಮಕ್ಕಳಿಗೆ ನಿತ್ಯ ಊಟ ಒದಗಿಸುತ್ತಿರುವುದಾಗಿ ದಾಖಲೆಗಳಲ್ಲಿ ಸುಳ್ಳು ನಮೂದಿಸಲಾಗುತ್ತಿದೆ. ಸರ್ಕಾರ ನಿಗದಿ ಪಡಿಸಿದಷ್ಟು ಮಕ್ಕಳಿಗೆ ಊಟ ಕೊಟ್ಟಂತೆ ಬಯೋಮೆಟ್ರಿಕ್​ ವ್ಯವಸ್ಥೆಯನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಾಸ್ತವದಲ್ಲಿ ಇಲ್ಲದ ಮಕ್ಕಳಿಗೂ ಊಟ ಕೊಟ್ಟಂತೆ ಬಯೋಮೆಟ್ರಿಕ್​ ಹಾಜರಾತಿ ಸೃಷ್ಟಿಸಿ ಸರ್ಕಾರಕ್ಕೆ ವಂಚಿಸುವ ಕಾರ್ಯ ಎಗ್ಗಿಲ್ಲದೆ ನಡೆಯುತ್ತಿದೆ. ಹೀಗಾಗಿ ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಅವರಿಗೆ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಹಾಗೊಂದು ವೇಳೆ ವಿಳಂಬ ಮಾಡಿದರೆ ಲೋಕಾಯುಕ್ತರ ಮೊರೆ ಹೋಗಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಪದಾಧಿಕಾರಿಳಾದ ಮಲ್ಲು ಮಾಳಿಕೇರಿ, ಅಂಬ್ರೇಶ ಹತ್ತಿಮನಿ, ಸಂತೋಷ ನಿರ್ಮಲಕರ್​, ಭೀಮಾಶಂಕರ ಹತ್ತಿಕುಣಿ, ನಿಂಗಪ್ಪ ಗುಡಗುಡಿ, ವಿಶ್ವರಾಜ ಹೊನಗೇರಾ, ರವಿ ಜಮ್ಮಾರ್​, ಕಾಶೀನಾಥ ನಾನೇಕ್​, ಅಶೋಕ ನಾಯಕ, ಶರಣು ಪತ್ರಕ್ಕೆ ಸಹಿ ಹಾಕಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net