ಭಾರತ ತಂಡದ ಯಾವುದೇ ಆಟಗಾರ್ತಿ ಸಿಂಗಲ್ಸ್ ವಿಶ್ವ ರ್ಯಾಂಕಿಂಗ್ನ ಅಗ್ರ 300ರಲ್ಲಿ ಸ್ಥಾನ ಪಡೆದಿಲ್ಲ. ವಿಶ್ವ ನಂ. 309 ಸಹಜ ಯಮಲಪಲ್ಲಿ ಭಾರತದ ನಂ.1 ಎನಿಸಿದ್ದು, ಶ್ರೀವಲ್ಲಿ ಭಮಿಡಿಪತಿ ಟೂರ್ನಿಯಲ್ಲಿ 5-0 ಗೆಲುವಿನ ದಾಖಲೆಯನ್ನು ಹೊಂದಿದ್ದಾರೆ. ಅಂಕಿತಾ ರೈನಾ, ಪ್ರಾರ್ಥನಾ ಥಾಂಬೋರೆ, ರಿಯಾ ಭಾಟಿಯಾ ತಂಡದ ಇತರ ಆಟಗಾರ್ತಿಯರಾಗಿದ್ದು, ವಿಶಾಲ್ ಉಪ್ಪಲ್ ತಂಡದ ಆಡದ ನಾಯಕರಾಗಿದ್ದಾರೆ. ವಿಶ್ವ ನಂ. 87ನೇ ಸ್ಥಾನದಲ್ಲಿರುವ ನೆದರ್ಲೆಂಡ್ನ ಸುಜಾನ್ ಲ್ಯಾಮೆನ್ಸ್ ಗುಂಪಿನ ಅಗ್ರ ಶ್ರೇಯಾಂಕಿತೆ ಆಗಿದ್ದಾರೆ.