ಬೀಳಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಆಚರಣೆ ವಿಷಯವಾಗಿ ವಿವಿಧ ಸಮಾಜದ ಮುಖಂಡರ ಶಾಂತಿ ಪೂರ್ವಭಾವಿ ಸಭೆಯಲ್ಲಿ ಸಿಪಿಐ ಹಣಮಂತ ಸಣಮನಿ ಮಾತನಾಡಿದರು. ಸಂಗಪ್ಪ ಕಂದಗಲ್ಲ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅನೀಲ ಗಚ್ಚಿನಮನಿ, ಸಿದ್ದು ಮೇಟಿ, ಶಿವಾನಂದ ಯಾಳವಾರಮಠ, ಸಿದ್ದು ಸಾರಾವರಿ, ಯಲ್ಲಪ್ಪ ಮೇಟಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಿಪಿಐ ಹಣಮಂತ ಸಣಮನಿ ಹೇಳಿಕೆ
ಮೊಹರಂ ಪೂರ್ವಭಾವಿ ಸಭೆ ಆಯೋಜನೆ
ಬೀಳಗಿ: ಮೊಹರಂ ಹಬ್ಬ ಹಿಂದೂ-ಮುಸ್ಲಿಂ ಭಾವೈಕ್ಯ ಸಾರುವ ಹಬ್ಬವಾಗಿದ್ದು, ಎಲ್ಲರೂ ಕೂಡಿ ಸಹೋದರತ್ವದಿಂದ ಪ್ರೀತಿ, ವಿಶ್ವಾಸ ವೈಭವದಿಂದ ಆಚರಣೆಮಾಡಿ ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದು ಸಿಪಿಐ ಹಣಮಂತ ಸಣಮನಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಆಚರಣೆಯ ಕುರಿತು ವಿವಿಧ ಸಮಾಜದ ಮುಖಂಡರ ಶಾಂತಿ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕು ಶಾಂತಿ ಸೌಹಾರ್ದ ಭಾವೈಕ್ಯ ತಾಣ. ಇಲ್ಲಿ ಹಿರಿಯರು, ಕಿರಿಯರು ಜಾತಿ ಭೇದಭಾವ ಇಲ್ಲದೇ ಸಹೋದರಂತೆ ನಡೆದುಕೊಂಡು ಹಲವಾರು ವರ್ಷಗಳಿಂದ ಬಂದಿದ್ದು, ಅದನ್ನು ಎಲ್ಲರೂ ಕೊಡಿಕೊಂಡು ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಯಾವುದೇ ಸಣ್ಣಪುಟ್ಟ ಘಟನೆ ನಡೆದರೂ ಅವುಗಳನ್ನು ನಮ್ಮ ಗಮನಕ್ಕೆ ತರಬೇಕು ಎಲ್ಲರೂ ಶಾಂತಿಯುತವಾಗಿ ಹಬ್ಬಕ್ಕೆ ಮೆರಗು ತರುವ ನಿಟ್ಟಿನಲ್ಲಿ ಆಚರಣೆ ಮಾಡಬೇಕು. ಮೊಹರಂದಲ್ಲಿ ಕಿಡಿಗೇಡಿಗಳು ಅನಾವಶ್ಯಕ ಗಲಾಟೆ ಮಾಡಿದರೆ ಅವರ ವಿರುದ್ಧ ದೂರು ದಾಖಲುಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಂಗಪ್ಪ ಕಂದಗಲ್ಲ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅನೀಲ ಗಚ್ಚಿನಮನಿ, ಸಿದ್ದು ಮೇಟಿ, ಶಿವಾನಂದ ಯಾಳವಾರಮಠ, ಸಿದ್ದು ಸಾರಾವರಿ, ಸಿದ್ದಪ್ಪ ದಳವಾಗಿ ಇದ್ದರು.