ನನ್ನ ಗಾಡಿ ಏಕೆ ಹಿಡಿಯುತ್ತೀರಿ? ಬಂಡವಾಳ ಹಾಕಿದ್ದೀರಾ?. ಹೆಲ್ಮೆಟ್ ಈಗ ಹಾಕಿಲ್ಲ. ಆಮೇಲೆ ಹಾಕುತ್ತೇನೆ ಬಿಡಿ. ದಂಡ ಕಟ್ಟಲಿಕ್ಕಾಗುವುದಿಲ್ಲ ಎಂದು ರಂಪಾಟ ಮಾಡಿದ್ದಾನೆ. ಕೊನೆಗೆ ಬಿಲ್ ತೆಗೆದುಕೊಂಡು ಮನೆಗೆ ಹೋಗಿ ಬಂದು ಕಟ್ಟುತ್ತೇನೆ. ಈಗ ನನ್ನ ಬಳಿ ಹಣ ಇಲ್ಲ ಅಂತಾ ಹೇಳಿದ್ದಾನೆ. ಇದೇ ವೇಳೆ ಯಾರ್ಯಾರಿಗೋ ಫೋನ್ ಮಾಡಿಸಿ ಶಿಫಾರಸ್ಸಿಗೆ ಯತ್ನಿಸಿದ್ದು ಇದರಲ್ಲಿ ಯಶಸ್ವಿಯಾಗದಿದ್ದಾಗ ಮತ್ತಷ್ಟು ಕೋಪಗೊಂಡಿದ್ದು ಗಾಡಿಯನ್ನು ರಸ್ತೆಗೆ ಅಡ್ಡಲಾಗಿ ಬೀಳಿಸಿ, ಏನಾದರೂ ಮಾಡಿಕೊಳ್ಳಿ, ನನ್ನ ಗಾಡೀನು ಬಿಡಲ್ಲ. ದಂಡವನ್ನು ಕಟ್ಟಲ್ಲ. ನಿಮ್ಮಂತಹ ಪೊಲೀಸರನ್ನು ನಾನು ನೋಡಿದ್ದೇನೆ. ನಾನು ರಸ್ತೆ ತೆರಿಗೆ ಕಟ್ಟುವ ಜತೆಗೆ ದಂಡವನ್ನು ಪಾವತಿಸಬೇಕಾ?. ರಸ್ತೆ ನೋಡಿ ಮೂರು ವರ್ಷಗಳಿಂದ ಸರಿ ಮಾಡುತ್ತಿದ್ದೀರಿ ಎಂದು ಕಿಡಿಕಾರಿದ್ದಾನೆ.