ಬೇಕಾಬಿಟ್ಟಿ ಬೈಕ್ ಓಡಿಸಿದ ನಾಲ್ವರ ಮೇಲೆ ದೂರು ದಾಖಲು

ಬೇಕಾಬಿಟ್ಟಿ ಬೈಕ್ ಓಡಿಸಿದವರ ಮೇಲೆ ದೂರು ದಾಖಲು
ಬೇಕಾಬಿಟ್ಟಿ ಬೈಕ್ ಓಡಿಸಿದವರ ಮೇಲೆ ದೂರು ದಾಖಲು
Published on

ಪ್ರಮುಖ ಮುಖ್ಯಾಂಶಗಳು

  • ಬೇಕಾಬಿಟ್ಟಿ ಬೈಕ್ ಓಡಿಸಿದವರ ಮೇಲೆ ದೂರು ದಾಖಲು
  • ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ನಾಲ್ವರ ಮೇಲೆ ದೂರು
  • ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು,ಬೈಕ್ ವಶ
ಬೇಕಾಬಿಟ್ಡಿ ಬೈಕ್ ರೈಡ್ ಮಾಡಿದ ನಾಲ್ವರ ಮೇಲೆ ದೂರು ದಾಖಲು
ಚಿಕ್ಕೋಡಿ: ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಅಡ್ಡಾದಿಡ್ಡಿ ಬೈಕ್ ಓಡಿಸಿ ಸಾರ್ವಜನಿಕ ರಿಗೆ ಕಿರಿಕಿರಿ ಉಂಟು ಮಾಡಿದ ಗ್ರಾಮದ ಅಜರುದ್ಧೀನ್ ಗೋಕಾಕ,ಶ್ರೀನಾಥ ಅಳಗುಂಡಿ,ಪ್ರವೀಣ ಬಿದರೆ,ಶಂಕರ ಬಿದರೋಳ್ಳಿ ಎಂಬಾತರನ್ನು ಪೊಲೀಸರು ವಶಕ್ಕೆ ಪಡೆದು ಸಂಚಾರಿ ನಿಯಮ ಉಲಂಘನೆಯಡಿ ದೂರು ದಾಖಲಿಸಿದ್ದಾರೆ.
ನಾಲ್ವರು ಯುವಕರು ಸೆ‌.೨ ರಂದು ಗ್ರಾಮದ ಬಸ್ ನಿಲ್ದಾಣದ ಬಳಿ ಬೇಕಾಬಿಟ್ಟಿ ಬೈಕ್ ಓಡಿಸಿರುವುದರ ಕುರಿತು ಇನ್ಸಾಗ್ರಾಮ್ ದಲ್ಲಿ ಪೋಸ್ಟ್ ಮಾಡಿರುವುದನ್ನು ಗಮನಿಸಿ ಕ್ರಮ ಜರುಗಿಸಲಾಗಿದ್ದು, ಆರೋಪಿಗಳ ನಾಲ್ಕು ಯಮಹಾ ಕಂಪನಿಯ ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡ ಹುಕ್ಕೇರಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net