ಅಪಘಾತದಲ್ಲಿ ಬೈಕ್​ ಸವಾರನಿಗೆ ಗಾಯ

Biker injured in accident
Biker injured in accident
Published on
ಚಿಂತಾಮಣಿ: ನಾರಾಯಣಹಳ್ಳಿ ಬಳಿ ರಸ್ತೆ ಬದಿಯ ಸೇತುವೆಗೆ ಶನಿವಾರ ಬೈಕ್​ ಡಿಕ್ಕಿಯಾಗಿ ಕಾಲುವೆಗೆ ಬಿದ್ದು, ಕೋಲಾರ ಜಿಲ್ಲೆ ಜಂಬಾಪುರದ ಸುರೇಶ್​ (50) ಗಾಯಗೊಂಡಿದ್ದಾರೆ.
ಸುರೇಶ್​ ಚಿಂತಾಮಣಿಯಿಂದ ನಾರಾಯಣಹಳ್ಳಿ ಮಾರ್ಗವಾಗಿ ಕೈವಾರಕ್ಕೆ ಬೈಕ್​ನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ತಡೆಗೊಡೆ ಮುರಿದು ಬೈಕ್​ ಸಮೇತ ಕಾಲುವೆಗೆ ಬಿದ್ದಿದ್ದಾರೆ. ಅಪಘಾತದ ಬಗ್ಗೆ ಸ್ಥಳಿಯರು 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸುರೇಶ್​ ಅವರನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net