ಅಪಘಾತದಲ್ಲಿ ಬೈಕ್​ ಸವಾರನಿಗೆ ಗಾಯ

Biker injured in accident
Biker injured in accident
Published on
ಚಿಂತಾಮಣಿ: ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯ ಕುರುಟಹಳ್ಳಿ ಕ್ರಾಸ್​ ಬಳಿ ಶನಿವಾರ ರಾತ್ರಿ 2 ಬೈಕ್​ಗಳ ನಡುವೆ ಅಪಘಾತ ಸಂಭವಿಸಿದ್ದು, ಬೈಕ್​ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.
ನಗರದ ಎನ್​.ಆರ್​ ಬಡಾವಣೆಯ ಶ್ರೀನಿವಾಸ ಗಾಯಾಳು. ಹಾಲಿನ ಕೇಂದ್ರದಲ್ಲಿ ಕೆಲಸ ಮುಗಿಸಿ ಬೈಕ್​ನಲ್ಲಿ ಮನೆಗೆ ವಾಪಸ್​ ಬರುವ ಮಾರ್ಗ ಮಧ್ಯೆ ಅವಡ ಸಂಭವಿಸಿದೆ.
ಶ್ರೀನಿವಾಸ ತಲೆಗೆ ಗಂಭೀರ ಗಾಯವಾಗಿದ್ದು, ಬೆಂಗಳೂರಿನ ನಿಮ್ಹಾನ್ಸ್​ಗೆ ದಾಖಲಿಸಲಾಗಿದೆ. ಗಾಯಾಳುವಿನ ಸಂಬಂಧಿ ಕೆ.ಮಹೇಶ್​ ನೀಡಿದ ದೂರಿನ ಮೇಲೆ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net