ಬಸ್​ಗೆ ಬೈಕ್​ ಡಿಕ್ಕಿ ಸವಾರನಿಗೆ ಗಾಯ

Biker injured after hitting bus
Biker injured after hitting bus
Published on
ಚಿಂತಾಮಣಿ: ಚಿಂತಾಮಣಿ& ಮುರುಗಮಲ್ಲಾ ಮುಖ್ಯರಸ್ತೆಯಲ್ಲಿ ಶನಿವಾರ ಸಂಜೆ ಖಾಸಗಿ ಬಸ್​ನಹಿಂಬದಿಗೆ ಬೈಕ್​ ಸವಾರ ಡಿಕ್ಕಿ ಹೊಡೆದಿದ್ದರಿಂದಸವಾರ ಗಾಯಗೊಂಡಿದ್ದಾನೆ.
ಶಿಡ್ಲಘಟ್ಟ ತಾಲೂಕಿನ ಆಜಾದ್​ ನಗರದ ನಿವಾಸಿ ಅತೀಕ್​ ಪಾಷಾ (27) ಗಾಯಗೊಂಡವರು. ಗಾಯಾಳು ಚಿಂತಾಮಣಿ ಮಾರ್ಗವಾಗಿ ಮುರಗಮಲ್ಲಾಗೆ ತೆರಳುತ್ತಿದ್ದ ವೇಳೆ ಮುಂದೆ ಹೋಗುತ್ತಿದ್ದ ಖಾಸಗಿ ಬಸ್​ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ಬೈಕ್​ ಸಂಪೂರ್ಣ ಜಖಂಗೊಂಡಿದೆ. ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net