ಚೇಳೂರು: ಚೇಳೂರು& ಬಾಗೇಪಲ್ಲಿ ಮುಖ್ಯರಸ್ತೆಯ ಗಂಗಮ್ಮ ಬೆಟ್ಟದ ರಸ್ತೆ ತಿರುವಿನಲ್ಲಿ ಭಾನುವಾರ ಸಂಜೆ ಬಸ್&ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿದ್ದು, ಒಬ್ಬರಿಗೆ ಗಾಯಗಳಾಗಿವೆ. ಆಂಧ್ರ ಪಿ.ಟಿ.ಎಂ. ಮಂಡಲ್ ಪುಲಿಕಲ್ಲು ಗ್ರಾಮದ ಅಭೀಷೇಕ್ (23)ಮೃತ.
ಮೃತಪಟ್ಟವನು ಚೇಳೂರು ತಾಲೂಕಿನ ನಾರೇಮದ್ದೇಪಲ್ಲಿ ಗ್ರಾಪಂ ಕುರುಬರಹಳ್ಳಿಯ ಅಮೃತಾ ಎಂಬುವರೊಂದಿಗೆ 3 ತಿಂಗಳ ಹಿಂದೆ ಮದುವೆಯಾಗಿದೆ. ಪತ್ನಿಯನ್ನು ನೋಡಲು ಹೋಗುವಾಗ ಮೂಗಿರೆಡ್ಡಿಪಲ್ಲಿ ರಸ್ತೆ ತಿರುವಿನಲ್ಲಿ ಬಸ್ ಬೈಕ್ಗೆ ಡಿಕ್ಕಿಯಾಗಿ ಅಭೀಷೇಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಜತೆಯಲ್ಲಿದ್ದ ಪ್ರವರ್ಧನ ಎಂಬಾತನಿಗೆ ಗಾಯಗಳಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಚೇಳೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.