ಮುಳಬಾಗಿಲು: ಕೆಂಚನಹಳ್ಳಿ ಬಳಿ ಗುರುವಾರ ದ್ವಿಚಕ್ರ ವಾಹನ ಆಯತಪ್ಪಿ ಬಿದ್ದು ಹಿಂಬದಿ ಸವಾರ ಮೃತಪಟ್ಟಿದ್ದಾರೆ.
ಮುನಿಯಪ್ಪ (60) ಮೃತರು. ಬೈಕ್ ಓಡಿಸುತ್ತಿದ್ದ ಶ್ರೀರಾಮ್ ಅವರಿಗೂ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಬ್ಬರು ಶ್ರೀನಿವಾಸಪುರ ತಾಲೂಕು ಲಕ್ಷಿ$್ಮಸಾಗರ ಗ್ರಾಮದಿಂದ ಕೆಂಚನಹಳ್ಳಿಗೆ ತೆರಳಿದ್ದರು. ಅಪಘಾತ ಸ್ಥಳದಲ್ಲಿದ್ದವರು ಗಾಯಾಳವನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ, ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಳಬಾಗಿಲು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.