ಚಿಂತಾಮಣಿ: ತಾಲೂಕಿನ ಕರಿಯಪಲ್ಲಿ ಗ್ರಾಮದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ನ್ನು ಅಪರಿಚಿತರು ಕಳವು ಮಾಡಿದ್ದಾರೆ. ಗ್ರಾಮದ ನಿವಾಸಿ ಅಕ್ತರ್ (34) ವಾಹನ ಕಳೆದುಕೊಂಡವರು.
ಜೂ.3ರಂದು ರಾತ್ರಿ ಅಕ್ತರ್ ಕೆಲಸ ಮುಗಿಸಿಕೊಂಡು ಕರಿಯಪಲ್ಲಿ ಗ್ರಾಮದಲ್ಲಿ ಬಾಡಿಗೆಗೆ ಇರುವ ಮನೆ ಮುಂದೆ ವಾಹನ ನಿಲ್ಲಿಸಿದ್ದರು. ಜೂ.4ರ ಮುಂಜಾನೆ ನೋಡಿದಾಗ ಬೈಕ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಜೂ.8ರಂದು ನಗರದ ಪೊಲೀಸ್ ಠಾಣೆಗೆ ಅಕ್ತರ್ ದೂರು ನೀಡಿದ್ದಾರೆ.