ಹೋಟೆಲ್​ ಮುಂದೆ ನಿಲ್ಲಿಸಿದ್ದ ಬೈಕ್​ ಕಳವು

Bike parked in front of hotel stolen
Bike parked in front of hotel stolen
Published on
ಚಿಂತಾಮಣಿ: ನಗರದ ಮಾರುತಿ ಸರ್ಕಲ್​ ಬಳಿಯ ತನ್ನದೇ ಹೋಟೆಲ್​ ಮುಂದೆ ಶೇಖ್​ ಮುಬಾರಕ್​ ಪಾಷಾ (38) ನಿಲ್ಲಿಸಿದ್ದ ಬೈಕ್​ ಕಳುವಾಗಿದೆ. ಜು.9ರಂದು ಮುಬಾರಕ್​ ಹೋಟೆಲ್​ ಮುಂದೆ ಬೈಕ್​ ನಿಲ್ಲಿಸಿ ಒಳಗೆ ಹೋಗಿದ್ದರು. ಮಧ್ಯಾಹ್ನ ಬಂದು ನೋಡಿದಾಗ ಬೈಕ್​ ಇರಲಿಲ್ಲ. ಎಲ್ಲೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗದ ಕಾರಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net