ಬೈಕಿಗೆ ಕಾರು ಡಿಕ್ಕಿಯಾಗಿ ಗಾಯ Bike hit by car

ಬೈಕಿಗೆ ಕಾರು ಡಿಕ್ಕಿಯಾಗಿ ಗಾಯ Bike hit by car
ಬೈಕಿಗೆ ಕಾರು ಡಿಕ್ಕಿಯಾಗಿ ಗಾಯ Bike hit by car
Published on
ಚಿಂತಾಮಣಿ: ಮದನಪಲ್ಲಿ&ಚಿಂತಾಮಣಿ ರಸ್ತೆಯ ಚೀಮನಹಳ್ಳಿ ಗೇಟ್​ ಬಳಿ ಮುಂದೆ ಹೋಗುತ್ತಿದ್ದ ಬೈಕ್​ಗೆ ಕಾರು ಡಿಕ್ಕಿ ಹೊಡೆದು ಬೈಕ್​ನಲ್ಲಿದ್ದ ಇಬ್ಬರು ಸವಾರರು ಮತ್ತು ಕಾರಿನಲ್ಲಿದ್ದ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.Bike hit by car
ಬೈಕ್​ ಸವಾರರು ನಗರದ ಸೊಣ್ಣಶೆಟ್ಟಹಳ್ಳಿ ಬಡಾವಣೆಯ ನಿವಾಸಿಗಳಾದ ಚೆನ್ನಕೇಶವರೆಡ್ಡಿ ಮತ್ತು ನಾಗರಾಜ್​, ಕಾರಿನ ಚಾಲಕ ಕಾರು ಬೆಂಗಳೂರಿನ ಕೆ.ಆರ್​.ಪುರಂ ಬಾಬು ಎಂದು ಗುರುತಿಸಲಾಗಿದೆ.
ನಾಗರಾಜ್​ ಮತ್ತು ಚೆನ್ನಕೇಶವರೆಡ್ಡಿ ಚೀಮನಹಳ್ಳಿಯಲ್ಲಿ ಕಾರ್ಯಕ್ರಮಕ್ಕೆ ಹೋಗಿ ಚಿಂತಾಮಣಿಗೆ ವಾಪಾಸ್​ ಬರುತ್ತಿದ್ದರೆ, ಕಾರಿನ ಚಾಲಕ ಬೆಂಗಳೂರಿನ ಕೆ.ಆರ್​.ಪುರಂ ನಿವಾಸಿ ಬಾಬು ಆಂಧ್ರದ ಮದನಪಲ್ಲಿಗೆ ಹೋಗಿ ಬೆಂಗಳೂರಿಗೆ ವಾಪಸ್​ ಹೋಗುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಕ್​ಗೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯ ರಭಸಕ್ಕೆ ಬೈಕ್​ ಸವಾರರು ರಸ್ತೆಯ ಪಕ್ಕದಿಂದ ದೂರದಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡರೆ ಕಾರು ಬೈಕ್​ಗೆ ಡಿಕ್ಕಿ ಹೊಡೆದ ನಂತರ ರಸ್ತೆಯ ಪಕ್ಕದ ಜಮೀನಿಗೆ ಹಾಕಿದ ಕಲ್ಲಿನ ಕೂಚುಗಳಿಗೆ ಹೋಗಿ ಡಿಕ್ಕಿ ಹೊಡೆದಿದ್ದು ಕಾರಿನ ಚಾಲಕನ ತಲೆಗೆ ಏಟು ಬಿದ್ದಿದೆ. ಸ್ಥಳಕ್ಕೆ ಬಂದ ಪೊಲೀಸರು ಆಂಬುಲೆನ್ಸ್​ಗೆ ಕರೆ ಮಾಡಿದ್ದಾರೆ. ಆದರೆ ಆಂಬುಲೆನ್ಸ್​ ಬಾರದ ಕಾರಣ ಖಾಸಗಿ ವಾಹನದಲ್ಲಿ ಗಾಯಾಳುಗಳನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಗಂಭಿರವಾಗಿ ಗಾಯಗೊಂಡಿದ್ದ ಚೆನ್ನಕೇಶವರೆಡ್ಡಿಗೆ ಪ್ರಥಮ ಚಿಕಿತ್ಸೆ ನೀಡಿ ಚಿಕಿತ್ಸೆಗಾಗಿ ಕೋಲಾರಕ್ಕೆ ರವಾನಿಸಲಾಗಿದೆ. ನಾಗರಾಜ್​ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net