ಸಾಹಿತ್ಯ, ಶಿಕ್ಷಣ ಕ್ಷೇತ್ರಕ್ಕೆ ಬಿದರಿ ಕೊಡುಗೆ ಅಪಾರ

ಸೇಡಂನಲ್ಲಿ ಆಯೋಜಿಸಿದ್ದ ಡಾ.ಚಂದ್ರಕಲಾ ಬಿದರಿ ಅವರ ಸಾಹಿತ್ಯಾವಲೋಕನ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರದ ಪ್ರಾಧ್ಯಾಪಕ ಡಾ.ವೆಂಕಟೇಶ ಕೊಲ್ಲಿ ಮಾತನಾಡಿದರು. ಪೊ.ಶೋಭಾದೇವಿ ಚಕ್ಕಿ, ಡಾ.ಸುವರ್ಣಾ ವಜೆ, ಲಿಂಗಾರೆಡ್ಡಿ ಶೇರಿ, ಡಾ.ಬಿ.ಆರ್​.ಅಣ್ಣಾಸಾಗರ, ಡಾ.ಸಚಿನ್​ ಬಿದರಿ ಇದ್ದರು.
ಸೇಡಂನಲ್ಲಿ ಆಯೋಜಿಸಿದ್ದ ಡಾ.ಚಂದ್ರಕಲಾ ಬಿದರಿ ಅವರ ಸಾಹಿತ್ಯಾವಲೋಕನ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರದ ಪ್ರಾಧ್ಯಾಪಕ ಡಾ.ವೆಂಕಟೇಶ ಕೊಲ್ಲಿ ಮಾತನಾಡಿದರು. ಪೊ.ಶೋಭಾದೇವಿ ಚಕ್ಕಿ, ಡಾ.ಸುವರ್ಣಾ ವಜೆ, ಲಿಂಗಾರೆಡ್ಡಿ ಶೇರಿ, ಡಾ.ಬಿ.ಆರ್​.ಅಣ್ಣಾಸಾಗರ, ಡಾ.ಸಚಿನ್​ ಬಿದರಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬ್ರಹ್ಮಕುಮಾರಿ ಆಶ್ರಮದ ಕಲಾವತಿ ಅಕ್ಕ ಶ್ಲಾಘನೆ
  • ಸೇಡಂನಲ್ಲಿ ಸಾಹಿತ್ಯಾವಲೋಕನ
ಸೇಡಂ: ವೃತ್ತಿಯಲ್ಲಿ ಪ್ರಾಧ್ಯಾಪಕಿಯಾಗಿದ್ದ ಡಾ.ಚಂದ್ರಕಲಾ ಬಿದರಿ ಅವರು ಸದಾ ಒಂದಿಲ್ಲೊಂದು ಸಾಮಾಜಿಕ ಚಟುವಟಿಕೆ ನಡೆಸುವುದಲ್ಲದೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಬ್ರಹ್ಮಕುಮಾರಿ ಆಶ್ರಮದ ಕಲಾವತಿ ಅಕ್ಕ ಅಭಿಪ್ರಾಯಪಟ್ಟರು.
ಬ್ರಹ್ಮಕುಮಾರಿ ಆಶ್ರಮದಲ್ಲಿ ಸಮ ಸಾಹಿತ್ಯ ವೇದಿಕೆಯಿಂದ ಭಾನುವಾರ ಆಯೋಜಿಸಿದ್ದ ಡಾ.ಚಂದ್ರಕಲಾ ಬಿದರಿ ಅವರ ಸಾಹಿತ್ಯಾವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರೋಗ್ಯದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಬಿದರಿ ಅವರು ಯೋಗ ಸಾಧಕರಾಗಿದ್ದರು. ಮಹಿಳಾ ಸಂಘಟನೆ ನಡೆಸಿ ಪ್ರತಿಭೆಯುಳ್ಳ ಹೆಣ್ಣು ಮಕ್ಕಳನ್ನು ಮುನ್ನೆಲೆಗೆ ತರುವ ಪ್ರಯತ್ನ ನಿರಂತರವಾಗಿ ನಡೆಸುತ್ತಿದ್ದರು. ಜತೆಗೆ ಹತ್ತಾರು ಪುಸ್ತಕಗಳನ್ನು ರಚಿಸುವ ಮೂಲಕ ಸಾಹಿತ್ಯ ಲೋಕಕ್ಕೆ ಅಮೂಲಾಗ್ರ ಕೊಡುಗೆ ನೀಡಿದ್ದಾರೆ. ಇಂತಹ ವ್ಯಕ್ತಿತ್ವದ ಒಬ್ಬ ಮಹಿಳೆ ಇನ್ನಷ್ಟು ದಿನಗಳ ಕಾಲ ಬದುಕು ಸಾಗಿಸಬೇಕಾಗಿತ್ತು. ವಿಧಿಯಾಟವೇ ಬೇರೆಯಾಗಿದ್ದು ಅವರು ದೈಹಿಕವಾಗಿ ನಮ್ಮೊಂದಿಗಲ್ಲವಾದರು ಅವರ ಸಂಘಟನಾತ್ಮಕ ಬದುಕು ನಮಗೆ ಆದರ್ಶವಾಗಿದೆ ಎಂದರು.
ಬಿದರಿ ಅವರ ಗದ್ಯ ಪದ್ಯ ಸಾಹಿತ್ಯ ಕುರಿತು ದೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ವೆಂಕಟೇಶ ಕೊಲ್ಲಿ ಉಪನ್ಯಾಸ ನೀಡಿ, ಪಿಯುಸಿಯಿಂದಲೇ ಸಾಹಿತ್ಯ ಮೈಗೂಡಿಸಿಕೊಂಡಿದ್ದ ಬಿದರಿ ಅವರು ಪದವಿಗೆ ಬಂದಾಗ ಕವನ ರಚನೆ ಮಾಡುವ ಮೂಲಕ ಕವಯತ್ರಿಯಾಗಿ ಹೊರ ಹೊಮ್ಮಿದರು. ಇವರು ರಚಿಸಿದ ಅನೇಕ ಹಾಡುಗಳು ಧ್ವನಿ ಸುರುಳಿಯಾಗಿ ಬಿಡುಗಡೆಹೊಂದಿವೆ ಎಂದು ತಿಳಿಸಿದರು.
ನೃಪತುಂಗ ಕಾಲೇಜಿನ ಪ್ರಾಧ್ಯಾಪಕಿ ಡಾ.ಸುವರ್ಣಾ ವಜೆ ಬಿದರಿ ಅವರ ಜನಪದ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದರು. ನಿವೃತ್ತ ಪ್ರಾಧ್ಯಾಪಕಿ ಶೋಭಾದೇವಿ ಚಕ್ಕಿ, ಸಮ ಸಾಹಿತ್ಯ ವೇದಿಕೆ ಅಧ್ಯಕ್ಷ ಡಾ.ಬಿ.ಆರ್​.ಅಣ್ಣಾಸಾಗರ ಮಾತನಾಡಿದರು. ಸಂಚಾಲಕ ಲಿಂಗಾರೆಡ್ಡಿ ಶೇರಿ, ಡಾ.ಸಚಿನ್​ ಬಿದರಿ ಇದ್ದರು. ಜ್ಯೋತಿ ಲಿಂಗಂಪಲ್ಲಿ ಪ್ರಾರ್ಥಿಸಿದರು. ಸಂತೋಷ ತೊಟ್ನಳ್ಳಿ ಸ್ವಾಗತಿಸಿದರು. ಶಿವಾರೆಡ್ಡಿ ಗೌಡನಹಳ್ಳಿ ನಿರೂಪಣೆ ಮಾಡಿದರು. ಶಿವಕುಮಾರ ಜುಲ್ಪಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net