ಸಿಎಂ ಅವರ "ಅಣ್ಣಾಜೀ, ಅಪ್ಪಾಜೀ..." ಎಂಬ ಸಂಬೋಧನೆಯನ್ನು ಅಬ್ಬಾಬ್ಬಾ ಏನು ನಯ ವಿನಯ ಎಂದು ಕುಟುಕಿದ ಕುಮಾರಸ್ವಾಮಿ, ಇಂತಹ ನಾಟಕಗಳನ್ನು ನಾನು ಕಾಣದವನೇನಲ್ಲ ಎಂದರು. ತಾವು ಬೆಂಗಳೂರು ಸುತ್ತಮುತ್ತ ಮಾತ್ರವಲ್ಲದೆ ಒಟ್ಟು 9 ಟೌನ್‌ಶಿಪ್‌ಗಳನ್ನು ಮಾಡಲು ಉದ್ದೇಶಿಸಿದ್ದಾಗಿ ತಿಳಿಸಿದ ಅವರು, ತಮಗೆ ಅಧಿಕಾರ ನಡೆಸುವ ಬಗ್ಗೆ ಯಾರೂ ಹೇಳಿಕೊಡುವುದು ಬೇಡ, ತಮಗೆ ದಿನಾ ರಾಜಕೀಯ ಮಾಡಲು ಬರುವುದಿಲ್ಲ ಎಂದರು. ಬೆಂಗಳೂರು-ಮೈಸೂರು ರಸ್ತೆ ಎನ್ನುವುದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕನಸಾಗಿದ್ದು, ಅದಕ್ಕಾಗಿ ಅವರು ಮಾಡಿದ ಹೋರಾಟದ ದೊಡ್ಡ ಹಿನ್ನೆಲೆಯಿದೆ. ಈ ವಿಷಯ ಕೇವಲ ಆರೋಪ ಪ್ರತ್ಯಾರೋಪಕ್ಕೆ ಸೀಮಿತವಲ್ಲ ಎಂದರು.