ನರೇಂದ್ರ ಮೋದಿಯವರು ಇಂತಹ ಯೋಜನೆ ಮಾಡಿದ್ದರು ಎಂಬ ಮಾತಿಗೆ ಪ್ರತಿಕ್ರಿಯಿಸಿದ ಸಚಿವ ಕುಮಾರಸ್ವಾಮಿ, ಪ್ರಧಾನಿ ಮೋದಿಯವರು ಅಂದು ಮಾಡಿದ್ದು ಭೂಕಂಪ ಸಂಭವಿಸಿ ಸಂಪೂರ್ಣವಾಗಿ ನಾಶವಾಗಿದ್ದ ಪ್ರದೇಶದಲ್ಲಿ, ಅಂತಹ ಹಾಳುಬಿದ್ದ ಜಾಗದಲ್ಲಿ ಅಭಿವೃದ್ಧಿ ಮಾಡಿದರೆ ಪರವಾಗಿಲ್ಲ. ಆದರೆ ಬಿಡದಿಯಲ್ಲಿ ತೋಟಗಳು, ಹೈನುಗಾರಿಕೆ ನಡೆಯುತ್ತಿರುವ ಫಲವತ್ತಾದ ಭೂಮಿ ಇದೆ. ಈ ನೈಜ ವಿಚಾರವನ್ನು ಮುಖ್ಯಮಂತ್ರಿಗಳು ಪ್ರಧಾನಿ ಮೋದಿಯವರಿಗೆ ತಿಳಿಸಿದ್ದಾರೆಯೇ? ಅವರಿಬ್ಬರು ಒನ್ ಟು ಒನ್ ಮಾತನಾಡಿದ್ದಾರೆ, ಅಲ್ಲಿ ಏನು ಮಾತನಾಡಿದ್ದಾರೋ ಯಾರಿಗೆ ಗೊತ್ತು? ಇದು ಸಂಪೂರ್ಣವಾಗಿ ಹಣ ಮಾಡುವ ತಂತ್ರ ಎಂದು ಕಿಡಿಕಾರಿದರು.