ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ರಿಯಲ್ ಎಸ್ಟೇಟ್ ದಳ್ಳಾಲಿ ಎಂದು ಕರೆದಿದ್ದ ವಿಪಕ್ಷದ ನಾಯಕ ಆರ್. ಅಶೋಕ್ ವಿರುದ್ಧ ಬಾಲಕೃಷ್ಣ ಕೆಂಡಾಮಂಡಲರಾಗಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಗೆ ಇನ್ನೂ ರಾಜಕೀಯ ಭವಿಷ್ಯವಿದೆ. ರಾಜ್ಯದಲ್ಲಿ ಒಳ್ಳೆಯ ಕೆಲಸ ಮಾಡಬೇಕು ಎಂದು ಹೊರಟಿದ್ದಾರೆ. ಆದರೆ ಅಶೋಕ್ ಅವರು ಡಿಕೆಶಿ ಅವರ ಹೆಸರು ಕೆಡಿಸಲು ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಡಿಕೆಶಿ ಬಗ್ಗೆ ಏಕವಚನದಲ್ಲಿ ಮಾತನಾಡುವುದನ್ನು ಅಶೋಕ್ ನಿಲ್ಲಿಸಬೇಕು. ಅಶೋಕ್ ಅವರೇ, ನೀವೇನು ಕುಬೇರನ ಅಥವಾ ಟಾಟಾ-ಬಿರ್ಲಾ ಮಗನಾ, ನೀನು ಮಿನಿಸ್ಟರ್ ಆದ ಮೇಲೆಯೇ ತಾನೇ ಇಷ್ಟೊಂದು ಆಸ್ತಿ ಮಾಡಿದ್ದು, ನಾನು ಎಲ್ಲೂ ದುಡ್ಡು ಪಡೆದಿಲ್ಲ ಎಂದು ಅಶೋಕ್ ಬಂದು ಪ್ರಮಾಣ ಮಾಡಲಿ, ಅವರ ಆಸ್ತಿ ತನಿಖೆ ಮಾಡಿಸಬೇಕಾ ಎಂದು ಏಕವಚನದಲ್ಲೇ ಪ್ರಶ್ನಿಸಿದ್ದಾರೆ.