ಚಿಂತಾಮಣಿ: ಒಳಮೀಸಲಾತಿ ರದ್ದುಮಾಡಿ ಈ ಹಿಂದಿನ ಮೀಸಲಾತಿಯಂತೆ ನೇಮಕಾತಿ ಮಾಡಬೇಕೆಂದು ಒತ್ತಾಯಿಸಿ ಮಾ.25 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಸಮುದಾಯ ಮುಖಂಡರು ಮಂಗಳವಾರ ಹಲವು ಬಸ್ಗಳಲ್ಲಿ ಹೊರಟರು.
ಜಿಪಂ ಮಾಜಿ ಸದಸ್ಯ ಶ್ರೀನಿವಾಸ್ ಮಾತನಾಡಿ, ಫ್ರೀಡಂ ಪಾರ್ಕ್ನಲ್ಲಿ ಮೀಸಲಾತಿ ಒಕ್ಕೂಟದಿಂದ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಾವು ಇಲ್ಲಿಂದ ಹಲವು ಬಸ್ಗಳಲ್ಲಿ ನಗರ ಮತ್ತು ತಾಲ್ಲೂಕಿನಾದ್ಯಂತ ಹೊರಡುತ್ತಿದ್ದೇವೆ. ನಮಗೆ ಸಿಗಬೇಕಾದ ಹಳೆಯ ಪದ್ಧತಿಯ ಮೀಸಲಾತಿಯನ್ನೇ ಮುಂದುವರಿಸಬೇಕು.ನಮ್ಮ ಹಕ್ಕುಗಳನ್ನು ರಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ.
ಚಿಂತಾಮಣಿ ತಾಲೂಕಿನ ಭೋವಿ ಸಮುದಾಯದಿಂದ 18 ಬಸ್ಗಳಲ್ಲಿ ನೂರಾರು ಜನರು ಬೆಂಗಳೂರಿನ ಫ್ರೀಡಂ ಪಾರ್ಕ್ ಚಲೋಗೆ ಹೊರಟಿದ್ದೇವೆ ಎಂದರು.