ಕುಣಿಗಲ್-:ತಾಲೂಕಿನ ಗೊಟ್ಟಿಕೆರೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಕಾಮಗಾರಿಗೆ ಆಯ್ಕೆ ಮಾಡಿಕೊಂಡಿದ್ದು, ಮುಂದಿನ ದಿನದಲ್ಲಿ ಕುಣಿಗಲ್ ಕೆರೆಯಿಂದ ಈ ಕೆರೆಗೆ ನೀರು ತುಂಬಿಸಲು ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಡಾ, ಎಚ್.ಡಿ.ರಂಗನಾಥ್ ಹೇಳಿದರು.
ತಾಲೂಕಿನ ಗೊಟ್ಟಿಕೆರೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಕಾಮಗಾರಿಯಡಿ ಅಭಿವೃದ್ಧಿ ಪಡಿಸಲು ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕೆರೆ ಪಕ್ಕದ ರಸ್ತೆಯನ್ನು ನವಿಕರಣ ಮಾಡಲಾಗುತ್ತಿದ್ದು, ತಾಲೂಕಿನ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನೂ ಅನುಷ್ಠಾನ ಮಾಡಲಾಗುತ್ತಿದೆ ಎಂದರು.
ಯೋಜನೆಯ ಪ್ರಾದೇಶಿಕ ನಿರ್ದೇಶಕ ಶಿನಪ್ಪ ಮಾತನಾಡಿ, ರಾಜ್ಯದಲ್ಲಿ 1000 ಕೆರೆಗಳ ಕಾಮಗಾರಿ ಸಂಸ್ಥೆಯಿಂದ ಮಾಡಲಾಗಿದ್ದು, ಕುಣಿಗಲ್ ತಾಲೂಕಿನಲ್ಲಿ 9 ಕೆರೆಗಳ ಕಾಮಗಾರಿ ಮಾಡಲಾಗಿದೆ. ಸ್ಥಳಿಯ ಕೆರೆ ಸಮಿತಿ ಅವರು ಹಾಗೂ ಗ್ರಾಮಸ್ಥರು ಈ ಯೋಜನೆಯ ಅನುಷ್ಠಾನದಲ್ಲಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕುಎಂದರು.