ಸ್ವಾಭಿಮಾನದ ಪ್ರತಿಕಾರ ಭೀಮ ಕೋರೆಗಾಂವ್​ ಯುದ್ಧ

Bhima Koregaon War: A Revenge of Self-Respect
Bhima Koregaon War: A Revenge of Self-Respect
Published on
ಗುಬ್ಬಿ: ಎರಡು ಶತಮಾನದ ಹಿಂದೆ ನಡೆದ ಕೋರೆಗಾಂವ್​ ಯುದ್ಧ ಕೇವಲ ಸೈನಿಕರ ವಿಜಯದ ಸಂಕೇತವಾಗಿರಲಿಲ್ಲ. ಶತಮಾನದ ಅನ್ಯಾಯ ಮತ್ತು ಅವಮಾನಗಳ ವಿರುದ್ಧ ಹೋರಾಡಿದ ಸಮಾನತೆ ಮತ್ತು ಸ್ವಾಭಿಮಾನದ ಪ್ರತಿಕಾರ ಎಂದು ಡಾ.ಬಾಬು ಜಗಜೀವನ್​ ರಾಮ್​ ಆದಿ ಜಾಂಬವ ಅಭಿವೃದ್ಧಿ ಸೇವಾ ಟ್ರಸ್ಟ್​ ಅಧ್ಯಕ್ಷ ಗುಬ್ಬಿ ಬಸವರಾಜ್​ ತಿಳಿಸಿದರು.
ತಾಲೂಕಿನ ಚೇಳೂರು ಹೋಬಳಿ ಶೇಷೇನಹಳ್ಳಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 208ನೇ ಭೀಮ ಕೋರೆಗಾಂವ್​ ವಿಜಯೋತ್ಸವ ಸಂಭ್ರಮಾಚರಣೆಯಲ್ಲಿ ಮಾತನಾಡಿ, 1818 ಜ.1 ರಂದು ನಡೆದ ಕೋರೆಗಾಂವ್​ ಯುದ್ಧದ ಪರಿಣಾಮ ಎಂದಿಗೂ ಚಾಲ್ತಿಯಲ್ಲಿರಬೇಕು ಎಂದರು.
ತಾಲೂಕಿನ ಗಡಿಭಾಗದಲ್ಲಿ ಕಾರ್ಯಕ್ರಮ ಮಾಡಬೇಕೆಂಬ ಒತ್ತಾಸೆಯಿಂದ ಆಯೋಜನೆ ಮಾಡಿದ ಪರಿಣಾಮ ನೂರಾರು ಮಹಿಳೆಯರು ಆಗಮಿಸಿದ್ದೀರಿ, ಅದೇ ರೀತಿ ಹೆಚ್ಚು ಸ್ವಸಹಾಯ ಸಂಘಗಳು ರಚನೆಯಾಗಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ ಎಂದು ತಿಳಿಸಿದರು.
ಉಪಾಧ್ಯಕ್ಷ ಹೊಸಕೆರೆ ಬಸವರಾಜ್​ ಮಾತನಾಡಿ, ಸಮುದಾಯದ ಜನರು ಅಂಬೇಡ್ಕರ್​ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳ ಭವಿಷ್ಯ ರೂಪಿಸಲು ಉನ್ನತ ವ್ಯಾಸಂಗಕ್ಕೆ ಒತ್ತು ನೀಡಬೇಕು. ಈ ಹಿಂದೆ ಅನುಭವಿಸಿದ್ದ ಕಷ್ಟಕಾರ್ಪಣ್ಯ ದೂರ ಮಾಡಲು ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಟ್ರಸ್ಟ್​ ಮಹಿಳಾ ಪ್ರತಿನಿಧಿ ಶಿವಲಿಂಗಮ್ಮ ಮಾತನಾಡಿ, ಜನಾಂಗದ ಅಭಿವೃದ್ಧಿಗೆ ಪೂರಕವಾಗಿ ಸ್ವಸಹಾಯ ಸಂಘಗಳು ರಚನೆಯಾಗಬೇಕು. ಪ್ರತಿ ತಾಲೂಕಿನಲ್ಲೂ ಒಕ್ಕೂಟ ರಚನೆಯಾಗಬೇಕು. ಆರ್ಥಿಕ ಸ್ಥಿತಿ ಉತ್ತಮ ಪಡಿಸಿಕೊಳ್ಳುವ ಜತೆಗೆ ನಮ್ಮ ಸಮುದಾಯ ಒಗ್ಗೂಡಿ ಮುಂದೆ ಸಾಗುವ ಕೆಲಸ ನಿರಂತರವಾಗಿ ನಡೆಯಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net