ಭೀಮ ಕೊರೆಗಾಂವ್​ ವಿಜಯೋತ್ಸವ ಆಚರಣೆ Ambedkar

ಅಂಬೇಡ್ಕರ್​ ಪ್ರತಿಮೆಗೆ ಮಾಲಾರ್ಪಣೆ  Ambedkar
ಅಂಬೇಡ್ಕರ್​ ಪ್ರತಿಮೆಗೆ ಮಾಲಾರ್ಪಣೆ Ambedkar
Published on
ಶ್ರೀನಿವಾಸಪುರ: ಪಟ್ಟಣದ ತಾಲೂಕು ಕಚೇರಿ ಮುಂಭಾಗದ ಅಂಬೇಡ್ಕರ್​ ಉದ್ಯಾನದಲ್ಲಿ ಗುರುವಾರ ದಲಿತ ಸಂಟನೆಗಳ ಮುಖಂಡರು ಅಂಬೇಡ್ಕರ್​ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮೇಣದ ಬತ್ತಿ ಬೆಳಗಿಸಿ ಭೀಮ ಕೋರೆಗಾಂವ್​ ವಿಜಯೋತ್ಸವ ಆಚರಿಸಿದರು.
ನಂತರ ಮಾತನಾಡಿದ ಗಾಂಡ್ಲಹಳ್ಳಿ ಚಲಪತಿ, 1818ರಲ್ಲಿ ಬ್ರಿಟಿಷರಿಗೆ ಮತ್ತು ಮರಾಠರಿಗೆ ಯುದ್ಧ ಸಂಭವಿಸಿದ್ದು, ಮರಾಠರ ಸಂಸ್ಥಾನದಲ್ಲಿ ಎರಡನೇ ಬಾಜಿರಾಯರ ಆಡಳಿತದಲ್ಲಿ ಮಹರ್​ ವರ್ಗಕ್ಕೆ ಸೇರಿದ ಇವರು ಸೈನಿಕರಾಗಿ ಕೆಲಸ ಮಾಡುತಿದ್ದರು.
ಯುದ್ದದಲ್ಲಿ ನಮಗೂ ಹೋರಾಟ ಮಾಡಲಿ ಅವಕಾಶ ಮಾಡಿಕೊಡಿ ಎಂದು ಮನವಿ ಸಲ್ಲಿಸಿದಾಗ ಧಿಕ್ಕರಿಸಿ ಅವಹೇಳನ ಮಾಡಿ ತಳಸಮಾಜ ಎಂದು ನಿಂದಿಸಲಾಗಿತ್ತು. ಇದನ್ನು ಸಹಿಸದ ಮಹರ್​ ಸೈನಿಕರು ಬ್ರಿಟಿಷರ ಆಶ್ರಯ ಪಡೆದು ಹೋರಾಟದಲ್ಲಿ ಮುಂಚೂಣಿ ಅವಕಾಶ ಪಡೆದು 500 ಮಂದಿ ಪೇಶ್ವೆ ಸೈನಿಕರನ್ನು ಸದೆಬಡಿದು ಯುದ್ಧದಲ್ಲಿ ಜಯ ಸಾಧಿಸಿದರು.ಇದರಲ್ಲಿ 25 ಮಂದಿ ಮಹರ್​ ಸೈನಿಕರು ವೀರ ಮರಣವನ್ನಪ್ಪಿದ ನಂತರ ಬ್ರಿಟಿಷರು ಇದರ ಸಂಕೇತವಾಗಿ ಮಹಾರಾಷ್ಟ್ರ ಪೂನಾ ಬಳಿ ಸ್ಥೂಪ ಶಿಲಾನ್ಯಾಸ ಸ್ಥಾಪನೆ ಮಾಡಿರುವ ಬಗ್ಗೆ ನಮೂದಿಸಿದ್ದರು.
ಇದರ ಇತಿಹಾಸವನ್ನು ಇಂಗ್ಲೆಂಡಿನಲ್ಲಿ ಗ್ರಂಥಾಲಯದಲ್ಲಿ ಅಂಬೇಡ್ಕರ್​ ಅವರು ಓದಿ ಅರ್ಥೈಸಿಕೊಂಡು ಕೊರೆಗಾಂವ್​ ಸ್ಥಳಕ್ಕೆ ಭೇಟಿ ನೀಡಿದಾಗ ಮುಚ್ಚಿ ಹೋಗಿರುವ Ambedkar ಸ್ಥೂಪಕ್ಕೆ ಮರುಜನ್ಮ ನೀಡಿದರು. ಅಂದಿನಿಂದ ಜ.1 ರಂದು ಪ್ರತಿ ವರ್ಷ ಆ ಸ್ಥಳಕ್ಕೆ ಭೇಟಿ ನೀಡಿ ಕೋರೆಗಾಂವ್​ ವಿಜಯೋತ್ಸವ ಆಚರಿಸಲಾಗುತ್ತಿದೆ. ಇದರ ಸಂಕೇತವಾಗಿ ನಾವು ಪಟ್ಟಣದಲ್ಲಿ ವಿಜಯೋತ್ಸವ ಆಚರಿಸುತ್ತಿದ್ದೇವೆ ಎಂದರು.
ನವ ಕರ್ನಾಟಕ ಸ್ವಾಭಿಮಾನಿ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಧಿಕ್​ ಅಹಮದ್​, ಕಲ್ಲೂರು ವೆಂಕಟೇಶ್​, ಉಪ್ಪರಪಲ್ಲಿ ಚಲಪತಿ, ಗುರುಮೂರ್ತಿ, ವೆಂಕಟರವಣ, ಆಲವಾಟ ವೆಂಕಟೇಶ್​, ಬದ್ರಿ ನರಸಿಂಹ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net