ಪಟ್ಟಣದಲ್ಲಿ ಪುರಸಭೆ ವತಿಯಿಂದ ಬುಧವಾರದಂದು ಸ್ಥಳಿಯ ಬಸ್ ನಿಲ್ದಾಣದ ಬಳಿ ಹಮ್ಮಿಕೊಂಡ ಭಾರತ ಜೋಡೋ ಯುವ ಸಂಘದ ನೋಂದಣಿ ಹಾಗೂ ಸಂಘದ ವಿವಿಧ ಸೇವಾ ಕ್ಷೇತ್ರಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೃಹತ್ ಜಾಗೃತಿ ಜಾಥಾಕ್ಕೆ ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಚಾಲನೆ ನೀಡಿದರು. ಈ ವೇಳೆ ಕನ್ಯಾ ಪ್ರೌಢಶಾಲೆ ಮುಖ್ಯಗುರು ನಾಗಶೇಟ್ಟಿ ಭದ್ರಶೇಟ್ಟಿ, ಆನಂದ ಕಾಂಬಳೆ, ರೇಣುಕಾ, ಸುಮಂತ, ನಾಗೇಶ, ಶರಣಪ್ಪ, ಇದ್ರೀಶಪಾಶ ಸೇರಿದಂತೆ ಅನೇಕರು ಇದ್ದರು.
Published on:
Copied
Follow Us
ಚಿಂಚೋಳಿ: ಭಾರತ ಜೋಡೋ ಯುವ ಸಂಘದ ಮುಖ್ಯ ಉದ್ದೇಶ ಹಾಗೂ ಯುವಕರು ಈ ಸಂಘದೊಂದಿಗೆ ಹೇಗೆ ನೋಂದಾಯಿಸಿಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಕರೆ ಕೊಟ್ಟರು.
ಪಟ್ಟಣದಲ್ಲಿ ಪುರಸಭೆ ವತಿಯಿಂದ ಬುಧವಾರದಂದು ಸ್ಥಳಿಯ ಬಸ್ ನಿಲ್ದಾಣದ ಬಳಿ ಹಮ್ಮಿಕೊಂಡ ಭಾರತ ಜೋಡೋ ಯುವ ಸಂಘದ ನೋಂದಣಿ ಹಾಗೂ ಸಂಘದ ವಿವಿಧ ಸೇವಾ ಕ್ಷೇತ್ರಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೃಹತ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುವಜನತೆಯನ್ನು ಸಾಮಾಜಿಕ, ಶೈಕ್ಷಣಿಕ ಮತ್ತು ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಈ ವೇದಿಕೆ ಅತ್ಯಂತ ಉಪಯುಕ್ತವಾಗಿದೆ ಎಂದರು.
ಪ್ರತಿಯೊಬ್ಬ ಅರ್ಹ ಯುವಕ, ಯುವತಿಯರು ನೋಂದಣಿ ಮಾಡಿಕೊಂಡು, ಸಂಘದ ಮೂಲಕ ನೀಡಲಾಗುವ ವಿವಿಧ ಸೇವಾ ಕ್ಷೇತ್ರಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಕೈಜೋಡಿಸಬೇಕು ಎಂದು ಮಾತನಾಡಿದರು.
ಇದಕ್ಕೂ ಮುಂಚೆ ಸ್ಥಳೀಯ ಬಸ್ ನಿಲ್ದಾಣದಿಂದ ಪ್ರಾರಂಭವಾದ ಜಾಗೃತಿ ಮೆರವಣಿಗೆಯು ಪಟ್ಟಣದ ಮುಖ್ಯ ರಸ್ತೆಯ ಮೂಲಕ ಹಾದು ಡಾ. ಬಿ. ಆರ್. ಅಂಬೇಡ್ಕರ್ ವೃತ್ತದವರೆಗೆ ತಲುಪಿತು. ಜಾಥಾದುದ್ದಕ್ಕೂ ಯುವಕರ ಸಬಲೀಕರಣ, ಸಾಮಾಜಿಕ ಸೇವೆ ಹಾಗೂ ಸಂಘಟನೆಗೆ ಸಂಬಂಧಿಸಿದ ಜಾಗೃತಿ ಘೋಷಣೆಗಳನ್ನು ಕೂಗಲಾಯಿತು.
ಈ ಸಂದರ್ಭದಲ್ಲಿ ಕನ್ಯಾ ಪ್ರೌಢಶಾಲೆ ಮುಖ್ಯಗುರು ನಾಗಶೇಟ್ಟಿ ಭದ್ರಶೇಟ್ಟಿ, ಆನಂದ ಕಾಂಬಳೆ, ರೇಣುಕಾ, ಸುಮಂತ, ನಾಗೇಶ, ಶರಣಪ್ಪ, ಇದ್ರೀಶಪಾಶ ಸೇರಿದಂತೆ ಅನೇಕರು ಇದ್ದರು.