ಸಮಾಜ ಘಾತುಕ ಶಕ್ತಿಗಳ ಎಚ್ಚರ ವಹಿಸಿರಿ

ಮಹಾಲಿಂಗಪುರದ ಪೊಲೀಸ್ ಠಾಣೆಯಲ್ಲಿ ಬಕ್ರೀದ ಹಬ್ಬದಂಗವಾಗಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ರಬಕವಿ-ಬನಹಟ್ಟಿ ಸಿಪಿಐ ಆರ್.ಆರ್.ಪಾಟೀಲ ಮಾತನಾಡಿದರು. ಠಾಣಾಧಿಕಾರಿ ಕಿರಣ ಸತ್ತಿಗೇರಿ, ಅಶೋಕ ಅಂಗಡಿ, ಮುಸ್ತಾಕ ಚಿಕ್ಕೋಡಿ, ನಜೀರ ಅತ್ತಾರ ಮೇಹಬೂಬ ಜೀರಗಾಳ, ಜಮೀರ್ ಯಕ್ಸಂಬಿ, ಹಾಸಿಂ ಪೆಂಡಾರಿ, ಬುಡ್ಡಾ ಪೆಂಡಾರಿ ಇದ್ದರು.
ಮಹಾಲಿಂಗಪುರದ ಪೊಲೀಸ್ ಠಾಣೆಯಲ್ಲಿ ಬಕ್ರೀದ ಹಬ್ಬದಂಗವಾಗಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ರಬಕವಿ-ಬನಹಟ್ಟಿ ಸಿಪಿಐ ಆರ್.ಆರ್.ಪಾಟೀಲ ಮಾತನಾಡಿದರು. ಠಾಣಾಧಿಕಾರಿ ಕಿರಣ ಸತ್ತಿಗೇರಿ, ಅಶೋಕ ಅಂಗಡಿ, ಮುಸ್ತಾಕ ಚಿಕ್ಕೋಡಿ, ನಜೀರ ಅತ್ತಾರ ಮೇಹಬೂಬ ಜೀರಗಾಳ, ಜಮೀರ್ ಯಕ್ಸಂಬಿ, ಹಾಸಿಂ ಪೆಂಡಾರಿ, ಬುಡ್ಡಾ ಪೆಂಡಾರಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಪಿಐ ಆರ್.ಆರ್.ಪಾಟೀಲ್ ಹೇಳಿಕೆ
  • ಶಾಂತಿ ಸಭೆ
ಮಹಾಲಿಂಗಪುರ: ಹಬ್ಬಗಳು ಸಮಾಜದ ಭಾವೈಕ್ಯದ ಸಂಕೇತ. ಯಾವುದೇ ಹಬ್ಬವನ್ನು ಸರ್ವ ಸಮಾಜದವರು ಶಾಂತಿ ಸಹಬಾಳ್ವೆಯಿಂದ ಆಚರಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂದು ರಬಕವಿ-ಬನಹಟ್ಟಿ ತಾಲೂಕು ಸಿಪಿಐ ಆರ್.ಆರ್.ಪಾಟೀಲ್ ಹೇಳಿದರು.
ಮಹಾಲಿಂಗಪುರ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಮೇ 28ರಂದು ನಡೆಯಲಿರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸೋಮವಾರ ನಡೆಸಿದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಹಬ್ಬಗಳ ಆಚರಣೆಯು ಆಯಾ ಸಮುದಾಯಗಳ ಜನತೆಯಲ್ಲಿ ಹರ್ಷೋಲ್ಲಾಸವನ್ನು ಇಮ್ಮಡಿಗೊಳಿಸುತ್ತದೆ.
ಈ ಸಮಯದಲ್ಲಿ ಶಾಂತಿಗೆ ಭಂಗ ತರುವಂತಹ ಕಾರ್ಯವನ್ನು ಯಾರೂ ಮಾಡಬಾರದು. ಮಾಡಿದ್ದಲ್ಲಿ ಪೊಲೀಸ್ ಇಲಾಖೆ ಸುಮ್ಮನೆ ಕುಳಿತುಕ್ಕೊಳ್ಳುವುದಿಲ್ಲ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕಟ್ಟಿಟ್ಟ ಬುತ್ತಿ.
ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ಅಥವಾ ಎಡಿಟ್ ಮಾಡಿರುವ ವಿಡಿಯೋಗಳನ್ನು ಮತ್ತು ಅದಕ್ಕೆ ತಕ್ಕಂತೆ ಇಲ್ಲಸಲ್ಲದ ಆರೋಪ ಮತ್ತು ಪ್ರತ್ಯಾರೋಪಗಳ ಸಂವಾದ ಸಹ ಬಿತ್ತರ ಮಾಡಿ ಸಮುದಾಯಗಳ ಮಧ್ಯೆ ಬೇಧ ಮೂಡಿಸುವ ಸಮಾಜ ಘಾತುಕ ಶಕ್ತಿಗಳ ಬಗ್ಗೆ ಎಚ್ಚರ ವಹಿಸಿರಿ ಎಂದರು.
ವಿವಿಧ ಸಮುದಾಯದ ಜನರು ಭಾಗವಹಿಸಿ ಶಾಂತಿ ಸುವ್ಯವಸ್ಥೆ ಬಗ್ಗೆ ಭರವಸೆ ನೀಡಿದರು.
ಸ್ಥಳೀಯ ಠಾಣಾಧಿಕಾರಿ ಕಿರಣ ಸತ್ತಿಗೇರಿ, ಅಶೋಕ ಅಂಗಡಿ, ಮುಸ್ತಾಕ ಚಿಕ್ಕೋಡಿ, ನಜೀರ ಅತ್ತಾರ ಮೇಹಬೂಬ ಜೀರಗಾಳ, ಜಮೀರ್ ಯಕ್ಸಂಬಿ, ಹಾಸಿಂ ಪೆಂಡಾರಿ, ಬುಡ್ಡಾ ಪೆಂಡಾರಿ, ಆನಂದ ಬಂಡಿ, ಯುನೂಸ್ ಬೀಳಗಿ, ಯಾಸೀನ್ ಐನಾಪೂರ, ನಿಂಗಪ್ಪ ಹ್ಯಾಗಾಡಿ, ಅನ್ನು ಪೆಂಡಾರಿ, ಮುಬಾರಕ ಅಲ್ಲಾಖಾನ, ಮಹ್ಮದ್ ಢವಳೇಶ್ವರ, ಯಾಸೀನ್ ಬಳಗಾರ ಮುಂತಾದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net