ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅದನ್ನೂ ಸಾಧಿಸಲು ಇಂದಿನಿಂದಲೇ ಯೋಜನೆ ರೂಪಿಸಿಕೊಳ್ಳಲಿದ್ದೇವೆ. ಜತೆಗೆ ಉತ್ತಮ ಫಲಿತಾಂಶಕ್ಕೆ ಶಿಕ್ಷಕರ ತಂಡ, ಸಮನ್ವಯ, ಸಂಪನ್ಮೂಲ ಶಿಕ್ಷಕರ ಮಾರ್ಗದರ್ಶನ ಹಾಗೂ ನಿರಂತರ ಪರಿಶೀಲನಾ ಸಭೆಗಳು ಉತ್ತಮ ಫಲಿತಾಂಶಕ್ಕೆ ಕಾರಣವಾಗಿವೆ. ವಿದ್ಯಾರ್ಥಿಗಳೂ ತಮ್ಮ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳಿಗೆ ತಿಳಿಸುವ ಮಟ್ಟಕ್ಕೆ ಮುನ್ನಡೆದಿದ್ದಾರೆ. ಇದು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆಯಾಗಿದೆ. ಅಲ್ಲದೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ವಿಶೇಷವಾಗಿ ಶಿಕ್ಷಕರ ಶ್ರಮವೇ ಇಂದಿನ ಸಾಧನೆಯ ಬೆನ್ನೆಲುಬಾಗಿದ್ದಾರೆ. ರಜಾ ದಿನಗಳನ್ನೂ ಲೆಕ್ಕಿಸದೆ, ಹಬ್ಬ, ಹರಿದಿನಗಳನ್ನೂ ಮರೆತು ವಿದ್ಯಾರ್ಥಿಗಳ ಪ್ರಗತಿಗೆ ದುಡಿದಿದ್ದಾರೆ ಎಂದು ಪ್ರಶಂಸಿಸಿದರು.