ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಪೊಲೀಸ್ ಹಾಗೂ ಸಂಚಾರ ಪೊಲೀಸ್ ಠಾಣೆಗಳ ಆವರಣಗಳು ನಿಧಾನವಾಗಿ ಸಕ್ಯೆಾಪ್ ಯಾರ್ಡ್‌ಗಳಾಗಿ ಮಾರ್ಪಡುತ್ತಿವೆ. ಸಂಚಾರ ನಿಯಮ ಉಲ್ಲಂಘನೆ, ಅಪಘಾತ, ಕಳ್ಳತನ, ಕ್ರಿಮಿನಲ್ ಪ್ರಕರಣಗಳು ಹಾಗೂ ದಾಖಲೆಗಳ ಕೊರತೆಯಿಂದಾಗಿ ಜಪ್ತಿ ಮಾಡಲಾದ ಲಕ್ಷಾಂತರ ವಾಹನಗಳು ವರ್ಷಗಟ್ಟಲೆ ಠಾಣೆಗಳಲ್ಲೇ ಬಿದ್ದು ತುಕ್ಕು ಹಿಡಿಯುತ್ತಿವೆ.