ಪಾರ್ಟಿಯ ಸಮಯದಲ್ಲೇ ಅತಿಯಾದ ಮ್ಯೂಸಿಕ್ ಹಾಗೂ ಗಲಾಟೆಯಿಂದಾಗಿ ಕಿರಿಕಿರಿ ಅನುಭವಿಸಿದ ಸ್ಥಳೀಯ ನಿವಾಸಿಗಳು 112 ಪೊಲೀಸ್ ಸಹಾಯವಾಣಿಗೆ ಕರೆ ದೂರು ಸಲ್ಲಿಸಿದರು. ಫೋನ್ ಕರೆಯ ಬೆನ್ನಲ್ಲೇ ಪೊಲೀಸರು ಲಾಡ್ಜ್‌ಗೆ ಆಗಮಿಸಿ, ಪಾರ್ಟಿ ಮಾಡುತ್ತಿದ್ದ ಗುಂಪನ್ನು ತಡೆದು ಪ್ರಶ್ನಿಸಿದರು. ನಿಮ್ಮ ಕೂಗಾಟ ಮತ್ತು ಗದ್ದಲವು ಹತ್ತಿರದ ನಿವಾಸಿಗಳಿಗೆ ತುಂಬಾ ತೊಂದರೆ ಉಂಟುಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು. ಇನ್ನು ಇದೇ ಸಮಯದಲ್ಲಿ ಪೊಲೀಸರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಇದಕ್ಕೆ ಯಾವುದೇ ಸಾಕ್ಷಿಗಳಿಲ್ಲ.