ದಕ್ಷಿಣ ಆಫ್ರಿಕಾ ಮತ್ತು ಟೀಮ್ ಇಂಡಿಯಾ ನಡುವಿನ ಏಕದಿನ ಸರಣಿ ಇತ್ತೀಚಿಗೆ ಮುಗಿದಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ. ಈ ಸರಣಿಗೆ ಕೆಎಲ್ ರಾಹುಲ್, ಹಂಗಾಮಿ ನಾಯಕರಾಗಿ ಜವಾಬ್ದಾರಿ ಹೊತ್ತಿದ್ದರು. ಅಲ್ಲದೆ, ಅಷ್ಟೇ ಅಚ್ಚುಕಟ್ಟಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ರಾಹುಲ್, 2-1 ಅಂತರದಿಂದ ಸರಣಿಯನ್ನು ಗೆಲ್ಲಿಸಿಕೊಟ್ಟರು. ಏಕದಿನ ಸರಣಿ ಮುಗಿದ ನಂತರ, ಕೆಎಲ್ ರಾಹುಲ್ ಅವರು ತಮ್ಮ ಎಲ್ಲ ಸಮಯವನ್ನು ತಮ್ಮ ಕುಟುಂಬಕ್ಕೆ ಮೀಸಲಿಟ್ಟಿದ್ದಾರೆ.