ಅಪಘಾತಗಳಿಗೆ ಕಡಿವಾಣ ಹಾಕಲು ಪ್ಲ್ಯಾನ್; BGS, ಪೀಣ್ಯ ಸೇರಿದಂತೆ 5 ಫ್ಲೈಓವರ್‌ಗಳಲ್ಲಿ ಹೊಸ ಸಂಚಾರ ನಿರ್ಬಂಧ ಜಾರಿ..Bengaluru

Bengaluru Traffic Police announce vehicle restrictions on five flyovers in the city from September 4
Bengaluru Traffic Police announce vehicle restrictions on five flyovers in the city from September 4
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನ 5 ಪ್ರಮುಖ ಫ್ಲೈಓವರ್‌ಗಳಲ್ಲಿ ವಾಹನ ಸಂಚಾರಕ್ಕೆ ಹೊಸ ನಿರ್ಬಂಧ
  • ಸೆಪ್ಟೆಂಬರ್ 4 ಮತ್ತು ಸೆಪ್ಟೆಂಬರ್ 11 ರಿಂದ ಹಂತ ಹಂತವಾಗಿ ಹೊಸ ನಿಯಮಗಳು ಜಾರಿ
  • ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ವಿಮಾನ ನಿಲ್ದಾಣ ರಸ್ತೆ ಫ್ಲೈಓವರ್‌ಗಳಲ್ಲಿ ಬೈಕ್ ಹಾಗೂ ಆಟೋಗಳಿಗೆ 24 ಗಂಟೆಗಳ ಕಾಲ ಬ್ರೇಕ್

ಬೆಂಗಳೂರು: ರಸ್ತೆ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರಿಗೆ ಸುಗಮ ಸಂಚಾರ ನೀಡುವ ಉದ್ದೇಶದಿಂದಾಗಿ ಬೆಂಗಳೂರು ಸಂಚಾರ ಪೊಲೀಸರು ಪ್ರಮುಖ ಐದು ಫೈಓವರ್ ಮತ್ತು ಎಲಿವೇಟೆಡ್ ಕಾರಿಡಾರ್‌ಗಳಲ್ಲಿ ಕೆಲವು ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಪ್ರಕಟಣೆ ಹೊಡಿಸಿದ್ದಾರೆ.

ಅಪಘಾತ ತಡೆಯಲು ಪ್ಲ್ಯಾನ್

ಫ್ಲೈ ಓವರ್​ ಮೇಲೆ ಸಂಚರಿಸುವ ವೇಳೆ ವಾಹನದ ವೇಗ, ರಸ್ತೆ ವಿನ್ಯಾಸ, ಅಪಘಾತವಾಗುವ ಸಾಧ್ಯತೆ ಮತ್ತು ಅವಘಡ ಸಂಭವಿಸಿದಾಗ ಉಂಟಾಗುವ ಪರಿಣಾಮದ ಕುರಿತು ಚರ್ಚೆಗಳು ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಸಂಚಾರ ವಿಭಾಗದ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಯಾವೆಲ್ಲ ಫ್ಲೈಓವರ್​ ಮೇಲೆ ನಿರ್ಬಂಧ ಇರಲಿದೆ?

ಬಿಜಿಎಸ್ (ಸಿರ್ಸಿ ಸರ್ಕಲ್) ಫ್ಲೈ ಓವರ್​, ಪೀಣ್ಯ ಮೇಲ್ಸೇತುವೆ, ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ, ಸಿಲ್ಕ್ ಬೋರ್ಡ್ ಹಾಗೂ ರಾಗಿಗುಡ್ಡ ನಡುವಿನ ಮೆಟ್ರೋ ಡಬಲ್-ಡೆಕ್ಕರ್ ಮೇಲ್ಸೇತುವೆ ಮತ್ತು ಸಂಜೀವನಗರ ಕ್ರಾಸ್ ಹಾಗೂ ವಿದ್ಯಾಶಿಲ್ಪ ಜಂಕ್ಷನ್ ವರೆಗೆ ಇರುವ ಎಲಿವೇಟೆಡ್ ಕಾರಿಡಾರ್‌ಗಳಲ್ಲಿ ದ್ವಿಚಕ್ರ ವಾಹನ, ಪ್ರಯಾಣಿಕರ ಆಟೋರಿಕ್ಷಾ ಮತ್ತು ಗೂಡ್ ಆಟೋರಿಕ್ಷಾಗಳ ಸಂಚಾರ ನಿರ್ಬಂಧಿಸಲಾಗಿದೆ.

​​​​​ ಫ್ಲೈ ಓವರ್​ ಮೇಲೆ ಸರಕು ಸಾಗಣೆ ವಾಹನಗಳಿಗೆ ದಿನದ 24 ಗಂಟೆಯೂ ಸಂಪೂರ್ಣ ನಿಷೇಧವಿರುತ್ತದೆ. ಮೂರು ಚಕ್ರದ ಸರಕು ವಾಹನಗಳು ಸೇರಿದಂತೆ ಇತರ ಸರಕು ವಾಹನಗಳ ಸಂಚಾರವನ್ನು ಬೆಳಿಗ್ಗೆ 7 ರಿಂದ 11 ರವರೆಗೆ ಮತ್ತು ಮಧ್ಯಾಹ್ನ 4 ರಿಂದ ರಾತ್ರಿ 10 ರವರೆಗೆ ನಿರ್ಬಂಧಿಸಲಾಗಿದೆ.

ಪೀಣ್ಯ ಫ್ಲೈ ಓವರ್​​

ಆಟೋ ರಿಕ್ಷಾಗಳು ಮತ್ತು ಗೂಡ್ಷಸ್​ ಆಟೋಗಳಿಗೆ 24 ಗಂಟೆಗಳ ಕಾಲ ನಿಷೇಧವಿರುತ್ತದೆ. ಭಾರಿ ವಾಹನಗಳಿಗೆ ಪೀಕ್​ ಅವರ್​ನಲ್ಲಿ ಅಂದರೆ ಬೆಳಿಗ್ಗೆ ಮತ್ತು ಸಂಜೆ ನಿರ್ಬಂಧಿಸಲಾಗುತ್ತದೆ.

ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ

ಎಲ್ಲಾ ವರ್ಗದ ಭಾರಿ, ಮಧ್ಯಮ ಮತ್ತು ಲಘು ಸರಕು ವಾಹನಗಳನ್ನು ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ನಿಷೇಧಿಸಲಾಗಿದೆ. ದ್ವಿಚಕ್ರ ವಾಹನಗಳು, ಪ್ರಯಾಣಿಕ ಆಟೋರಿಕ್ಷಾಗಳು ಮತ್ತು ತ್ರಿಚಕ್ರ ಸರಕು ವಾಹನಗಳ ಸಂಚಾರವನ್ನು 24 ಗಂಟೆಗಳ ಕಾಲ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸಿಲ್ಕ್ ಬೋರ್ಡ್ - ರಾಗಿಗುಡ್ಡದ ಬಳಿಯ ಮೆಟ್ರೋ ಡಬಲ್-ಡೆಕ್ಕರ್ ಮೇಲ್ಸೇತುವೆ ಮೇಲೆ ಭಾರಿವಾಹನಗಳ ಸಂಚಾರದ ಮೇಲೆ 24 ಗಂಟೆಗಳ ಕಾಲ ನಿಷೇಧ ಹೇರಲಾಗಿದೆ.

ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಕಾರಿಡಾರ್

ಸಂಜೀವನಗರ ಕ್ರಾಸ್ - ವಿದ್ಯಾಶಿಲ್ಪ ಜಂಕ್ಷನ್ ಎಲಿವೇಟೆಡ್ ಕಾರಿಡಾರ್ ಫ್ಲೈ ಓವರ್​​ ಮೇಲೆ ದ್ವಿಚಕ್ರ ವಾಹನಗಳು ಮತ್ತು ಆಟೋರಿಕ್ಷಾಗಳಿಗೆ 24 ಗಂಟೆಗಳ ಕಾಲ ನಿಷೇಧವಿದೆ. ಎಲ್ಲಾ ವರ್ಗದ ಸರಕು ವಾಹನಗಳು ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಸಂಚರಿಸುವುದನ್ನು ನಿರ್ಬಂಧಿಸಲಾಗಿ
ವಿನ್ಯಾಸ ಮತ್ತು ಅಗಲಕ್ಕೆ ಅನುಗುಣ ವಾಗಿ ವಾಹನ ಸಂಚಾರ ವ್ಯವಸ್ಥೆ ರೂಪಿಸುವುದು, ಅಪಘಾತ ಸಂಭವಿಸಿ ದಲ್ಲಿ ಅದರ ಪರಿಣಾಮವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು, ವಾಹನ ದುರಸ್ತಿಯಿಂದ ಉಂಟಾಗುವ ದಟ್ಟಣೆ ತಪ್ಪಿಸುವುದು, ಫೈಓವರ್ ಗಳ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಉಂಟಾಗುವ ವಾಹನ ದಟ್ಟಣೆ ನಿಯಂತ್ರಿ ಸುವುದು, ಅಪಘಾತ ಅಥವಾ ಇತರ ತುರ್ತು ಸಂದರ್ಭಗಳಲ್ಲಿ ಸಂಚಾರ ನಿರ್ವಹಣೆಗೆ ಅನುಕೂಲ ಕಲ್ಪಿಸುವುದು ಸೇರಿ ಪಾದಚಾರಿ ಮತ್ತು ದ್ವಿಚಕ್ರ ವಾಹನ ಸವಾರರ ಸುರಕ್ಷತೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಬಂಧಿಸಲಾಗಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net