ಸ್ಕೂಟರ್​ನಲ್ಲಿ ಮೊಮ್ಮಕ್ಕಳನ್ನು ಶಾಲೆಗೆ ಬಿಡಲು ತೆರಳಿದಾಗ ದುರಂತ; ಯಮನಂತೆ ಬಂದ ಟ್ಯಾಂಕರ್​ ಡಿಕ್ಕಿ..ಅಜ್ಜ ಸಾವು| Bengaluru

Bengaluru Man Crushed To Death By Tanker
Bengaluru Man Crushed To Death By Tanker
Published on
ಬೆಂಗಳೂರು: ಮೊಮ್ಮಕ್ಕಳನ್ನು ಶಾಲೆಗೆ ಬಿಡಲು ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ನೀರಿನ ಟ್ಯಾಂಕರ್​ವೊಂದು ಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಲಹಂಕ ನ್ಯೂ ಟೌನ್‌ನಲ್ಲಿ ಇಂದು(ಜು.17)ರಂದು ಬೆಳ್ಳಂಬೆಳಗ್ಗೆ ನಡೆದಿದೆ.
ಗುರುವಾರ ಬೆಳಿಗ್ಗೆ ಮೊಮ್ಮಕ್ಕಳನ್ನು ಬಿಡಲು ತೆರಳಿದ್ದಾಗ ಸಂಭವಿಸಿರುವ ಘಟನೆಯ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಕರಣದ ಭೀಕರತೆ ಎದೆ ಝಲ್​​​ ಎನಿಸುವಂತೆ ಮಾಡುತ್ತದೆ. ಘಟನಾ ಸ್ಥಳದಲ್ಲೇ ವೃದ್ಧ ಮೃತಪಟ್ಟಿದ್ದು, ಮಕ್ಕಲು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಅತೀ ವೇಗವಾಗಿ ನೀರಿನ ಟ್ಯಾಂಕರ್​ ಚಾಲನೆ ಮಾಡುತ್ತಾ ಬಂದ ಚಾಲಕ ವೃದ್ಧನ ಸ್ಕೂಟಿಗೆ ಗುದ್ದಿದ್ದಾನೆ. ಘಟನೆಯಿಂದ ಭಯಗೊಂಡ ಆತ ಪರಾರಿಯಾಗಿದ್ದಾನೆ. ದೂರು ದಾಖಲಿಸಿಕೊಂಡಿದ್ದು, ಆತನಿಗಾಗಿ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net