ವಾಹನ ಸವಾರರೇ ಗಮನಿಸಿ; ಬೆಂಗಳೂರಿನ ಈ ಪ್ರಮುಖ ರಸ್ತೆಗಳಲ್ಲಿ 60 ದಿನ ಸಂಚಾರ ಬಂದ್, ಪರ್ಯಾಯ ಮಾರ್ಗ ಯಾವುದು?.. Kamaraj Road
Kamaraj Road Closed For 60 Days
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಾಮರಾಜ ರಸ್ತೆ ಸಮೀಪ ಕೆಲವು ಪ್ರಮುಖ ರಸ್ತೆಗಳಲ್ಲಿ 60 ದಿನ ಸಂಚಾರ ನಿರ್ಬಂಧ
ನಾಲಾ ಕ್ರಾಸ್ ರಸ್ತೆ ಬಳಿ RCC ಕಲ್ವರ್ಟ್ ಕಾಮಗಾರಿ ಹಿನ್ನೆಲೆ ಈ ನಿರ್ಧಾರ
ಸುಗಮ ಸಂಚಾರಕ್ಕಾಗಿ ಬೆಂಗಳೂರು ಸಂಚಾರ ಪೊಲೀಸರಿಂದ ಪರ್ಯಾಯ ಮಾರ್ಗ ಪ್ರಕಟಣೆ
ಬೆಂಗಳೂರು: ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಮರಾಜ ರಸ್ತೆಯ ನಾಲಾ ಕ್ರಾಸ್ ರಸ್ತೆ ಸಮೀಪ ನೂತನ ಆರ್‌ಸಿಸಿ ಕಲ್ವರ್ಟ್ ಕಟ್ಟಡ ಕಾಮಗಾರಿ ಕೈಗೊಂಡ ಹಿನ್ನೆಲೆ ಈ ಭಾಗದ ಕೆಲವು ರಸ್ತೆಗಳಲ್ಲಿ ಭಾನುವಾರದಿಂದ 60 ದಿನಗಳ ಕಾಲ ತಾತ್ಕಾಲಿಕ ಸಂಚಾರ ನಿರ್ಬಂಧ( Kamaraj Road Closed) ಹೇರಲಾಗಿದೆ.
ಈಗಿದ್ದ ಹಳೇ ಕಲ್ಲಿನ ಕಲ್ವರ್ಟ್ ಕಟ್ಟಡವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವತಿಯಿಂದ ತೆರವುಗೊಳಿಸಲಾಗುತ್ತಿದೆ. ಇದರ ಪರಿಣಾಮವಾಗಿ ಶಿವಾಜಿನಗರ ಸಂಚಾರ ಪೊಲೀಸರು, ಸುಗಮ ಸಂಚಾರಕ್ಕಾಗಿ ಪರ್ಯಾಯ ಮಾರ್ಗವನ್ನು ಬೆಂಗಳೂರು ಸಂಚಾರ ಪೊಲೀಸರು ಪ್ರಕಟಿಸಿದ್ದಾರೆ.
ಈ ಮಾರ್ಗದಲ್ಲಿ ಸಂಚಾರ ನೀಷೇಧ
ಕಾಮರಾಜ ರಸ್ತೆಯ ವಿಠೋಬಾ ದೇವಸ್ಥಾನದಿಂದ ನಾಲಾ ರಸ್ತೆಯವರೆಗೆ
ಕೆ.ಆರ್ ರಸ್ತೆ-ಕಬ್ಬನ್ ರಸ್ತೆ ಜಂಕ್ಷನ್‌ನಿಂದಡಿಕನ್ಸನ್ ಜಂಕ್ಷನ್ ಕಡೆಗೆ ಬರುವ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾದೆ.
ಕಮರ್ಷಿಯಲ್ ಸ್ಟ್ರೀಟ್ ಕಡೆಯಿಂದ ಕಾಮರಾಜ ರಸ್ತೆ ಮೂಲಕ ಪುಲಿಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸುವ ವಾಹನಗಳು ವಿಠೋಬಾ ದೇವಸ್ಥಾನದ ಹತ್ತಿರ ಬಲ ತಿರುವು ಪಡೆದು ವೀರಪಿಳ್ಳೆ ಸ್ಟ್ರೀಟ್ ಮೂಲಕ ನಾಗಮ್ಮ ದೇವಸ್ಥಾನದ ಹತ್ತಿರ ಎಡ ತಿರುವು ಪಡೆದು ಸೇಂಟ್ ಜಾನ್ ರಸ್ತೆ ಮೂಲಕ ಪುಲಿಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸಬಹುದು.
ಕಬ್ಬನ್ ರಸ್ತೆಯಿಂದ ಕಾಮರಾಜ ರಸ್ತೆ ಮೂಲಕ ಪುಲಿಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸುವ ಎಲ್ಲ ರೀತಿಯ ವಾಹನಗಳು ಕೆ.ಆರ್ ರಸ್ತೆ- ಕಬ್ಬನ್ ರಸ್ತೆ ಜಂಕ್ಷನ್ ಹತ್ತಿರ ಬಲ ತಿರುವು ಪಡೆದು ಕಬ್ಬನ್ ರಸ್ತೆ ಮಾರ್ಗದಲ್ಲಿ ತೆರಳಿ ಮಣಿಪಾಲ್ ಜಂಕ್ಷನ್ ಹತ್ತಿರ ಎಡ ತಿರುವು ಪಡೆದು ಡಿಕನ್ಸನ್ ರಸ್ತೆ ಮುಖೇನ ನೇರವಾಗಿ ತೆರಳಿ ಬ್ಲೂ-ಸ್ಟೋನ್ ಹತ್ತಿರ ಬಲ ತಿರುವು ಪಡೆದು ಸೇಂಟ್ ಜಾನ್ ರಸ್ತೆ ಮೂಲಕ ಚಲಿಸಬಹುದಾಗಿದೆ.
ಡಿಸ್ಟೆನ್ಸರಿ ರಸ್ತೆ (ಆಲೀಸ್ ಜಂಕ್ಷನ್) ಕಡೆಯಿಂದ ಕಾಮರಾಜ ರಸ್ತೆ ಮೂಲಕ ಪುಲಿಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸುವ ವಾಹನಗಳು ಡಿಕನ್ಸನ್ ರಸ್ತೆ ಮೂಲಕ ನೇರವಾಗಿ ಚಲಿಸಿ ಬ್ಲೂ-ಸ್ಟೋನ್ ಹತ್ತಿರ ಎಡ ತಿರುವು ಪಡೆದು ಸೇಂಟ್ ಜಾನ್ ರಸ್ತೆ ಮೂಲಕ ಸಂಚರಿಸಬಹುದಾಗಿದೆ.