ಕೆಲವು ಗ್ರಾಹಕರು ಈ ಶುಲ್ಕದ ಕಾನೂನುಬದ್ಧತೆಯನ್ನು ಪ್ರಶ್ನಿಸಿದ್ದಾರೆ. ಆದರೆ, ಅಚ್ಚರಿಯೆಂದರೆ ಕೆಲವರು ಕೆಫೆಯ ಪರವಾಗಿಯೂ ಮಾತನಾಡಿದ್ದಾರೆ. ಹೆಚ್ಚುತ್ತಿರುವ ಎಲ್‌ಪಿಜಿ ವೆಚ್ಚವನ್ನು ಸರಿದೂಗಿಸಲು ಕೆಫೆಗಳು ಕಷ್ಟಪಡುತ್ತಿವೆ. 17 ರೂಪಾಯಿ ದೊಡ್ಡ ವಿಷಯವಲ್ಲ, ಬದಲಿಗೆ ಬಿಲ್‌ನಲ್ಲಿ ರಿಯಾಯಿತಿಯೂ ಸಿಕ್ಕಿದೆ ಎಂದು ಕೆಲವರು ಕೆಫೆಯ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.