ಹೌದು ನೀವು ಇದನ್ನು ನಂಬಲೇ ಬೇಕು. ಬೆಂಗಳೂರಿನಲ್ಲಿ ಕಾಫಿಗಿಂತ ಟೀ ಪ್ರಿಯರು ಹೆಚ್ಚಾಗುತ್ತಿದ್ದಾರೆ ಎಂದು ವರದಿಯೊಂದರಿಂದ ಬೆಳಕಿಗೆ ಬಂದಿದೆ. ಚಳಿ ಇರಲಿ, ಮಳೆ ಇರಲಿ, ಬಿಸಿಲೇ ಇರಲಿ ಅಥವಾ ತಲೆನೋವು ಇರಲಿ ಟೀ ಬೇಕು. ಬೆಳಗೆದ್ದ ಕೂಡಲೇ ಚಹ ಜೊತೆಗೆ ಪತ್ರಿಕೆ ಓದಬೇಕು. ಸ್ಟ್ರೆಸ್ ಫೀಲ್ ಆಗ್ತಿದ್ರೆ ಟೀ ಬೇಕು. ಬೋರ್ ಆಗುತ್ತಿದ್ದರೂ ಟೀ ಬೇಕು. ಖುಷಿಯಾಗಿದ್ದರೂ ಟೀ ಬೇಕು.. ಇಂತಹ ರೀಲ್ಸ್ಗಳು ಇತ್ತೀಚೆಗೆ ಜಾಸ್ತಿಯಾಗಿದೆ, ಇದು ಸತ್ಯ ಕೂಡ.