ಬೆಂಗಳೂರಿಗೆ ಕ್ರಾಫ್ಟ್‌ ಬಿಯರ್‌ ರಾಜಧಾನಿ ಗರಿ; ಸೆ.9ರಿಂದ ಬ್ರೀವ್ಸ್ & ಸ್ಪಿರಿಟ್ ಎಕ್ಸ್​ಪೋ

ಬೆಂಗಳೂರಿಗೆ ಕ್ರಾಫ್ಟ್‌ ಬಿಯರ್‌ ರಾಜಧಾನಿ ಗರಿ; ಸೆ.9ರಿಂದ ಬ್ರೀವ್ಸ್ & ಸ್ಪಿರಟ್ ಎಕ್ಸ್​ಪೋ
ಬೆಂಗಳೂರಿಗೆ ಕ್ರಾಫ್ಟ್‌ ಬಿಯರ್‌ ರಾಜಧಾನಿ ಗರಿ; ಸೆ.9ರಿಂದ ಬ್ರೀವ್ಸ್ & ಸ್ಪಿರಟ್ ಎಕ್ಸ್​ಪೋ
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿಗೆ ಕ್ರಾಫ್ಟ್‌ ಬಿಯರ್‌ ರಾಜಧಾನಿ ಗರಿ
  • ಸೆ.9ರಿಂದ ಬ್ರೀವ್ಸ್ & ಸ್ಪಿರಟ್ ಎಕ್ಸ್​ಪೋ-2026
  • ಬ್ಲಂಡ್ & ಬ್ಯುಲ್ಡ್ ಧ್ಯೇಯದೊಂದಿಗೆ ನಡೆಯುವ ಪ್ರದರ್ಶನ

ಬೆಂಗಳೂರು:ಭಾರತದಮದ್ಯಪಾನೀಯ ಮಾರುಕಟ್ಟೆ ನವೀನತೆಹಾಗೂ ಪ್ರೀಮಿಯಂ ಉತ್ಪನ್ನಗಳತ್ತಸಾಗುತ್ತಿದ್ದು,ಕರ್ನಾಟಕಅದರ ಪ್ರಮುಖ ಪ್ರಯೋಗಶಾಲೆಯಾಗಿಹೊರಹೊಮ್ಮಿದೆ.ಬೆಂಗಳೂರಿನಲ್ಲಿನಬ್ರೂಪಬ್‌ಗಳು,ಮೈಕ್ರೋಬ್ರೂವರಿಗಳುಹಾಗೂ ವೈವಿಧ್ಯಮಯ ಕ್ರಾಫ್ಟ್‌ಬಿಯರ್‌ಗಳು ನಗರವನ್ನು ದೇಶದಕ್ರಾಫ್ಟ್‌ ಬಿಯರ್‌ ರಾಜಧಾನಿಯಾಗಿಬೆಳೆಸಿವೆ.

ಈಹಿನ್ನೆಲೆಯಲ್ಲಿ 7ನೇಆವೃತ್ತಿಯ ಬ್ರೀವ್ಸ್ ಮತ್ತುಸ್ಪಿರಿಟ್ ಎಕ್ಸ್​ಪೋ -2026ಸೆ.9ರಿಂದ11ರವರೆಗೆನಗರದ ವೈಟ್‌ಫೀಲ್ಡ್‌ನ ಕೆಟಿಪಿಒಸಭಾಂಗಣದಲ್ಲಿ ನಡೆಯಲಿದೆ.ಬ್ಲಂಡ್&ಬ್ಯುಲ್ಡ್’(ಸಮ್ಮಿಶ್ರಿಸಿಮತ್ತು ನಿರ್ಮಿಸಿ)ಧ್ಯೇಯದೊಂದಿಗೆನಡೆಯುವ ಪ್ರದರ್ಶನದಲ್ಲಿಬ್ರೂವರ್‌ಗಳು,ಡಿಸ್ಟಿಲ್ಲರ್‌ಗಳು,ಹೋಟೆಲ್‌ಉದ್ಯಮದ ಪ್ರತಿನಿಧಿಗಳು ಹಾಗೂತಂತ್ರಜ್ಞಾನ ಪಾಲುದಾರರುಭಾಗವಹಿಸಲಿದ್ದಾರೆ.

ಈಬಾರಿ ಮೊದಲ ಬಾರಿಗೆ ಜಪಾನ್ಪೆವಿಲಿಯನ್ಪರಿಚಯಿಸಲಾಗುತ್ತಿದ್ದು,ಜಪಾನೀಸ್ಸಾಕೆ ಮತ್ತು ಶೋಚು ಪರಂಪರೆ,ರುಚಿಪರೀಕ್ಷೆ ಹಾಗೂ ಮೂಲ-ಪೂರೈಕೆಅವಕಾಶಗಳಿಗೆ ವೇದಿಕೆಯಾಗಲಿದೆ.ಕಾಫಿಮತ್ತು ಟೀ ಪೆವಿಲಿಯನ್‌ ಕೂಡಗುಣಮಟ್ಟ,ಕರಕುಶಲತೆಮತ್ತು ಹೊಸ ಅನುಭವಗಳನ್ನುಪರಿಚಯಿಸಲಿದೆ.

ಕರ್ನಾಟಕದಲ್ಲಿ2026ರಏಪ್ರಿಲ್‌ನಿಂದ ಆಲ್ಕೋಹಾಲ್‌ಪ್ರಮಾಣ ಆಧಾರಿತ ಅಬಕಾರಿ ವ್ಯವಸ್ಥೆಜಾರಿಗೆ ಬಂದಿರುವುದು ಉತ್ಪಾದಕರಿಗೆಬೆಲೆ ನಿಗದಿಯಲ್ಲಿ ಹೆಚ್ಚಿನಸ್ವಾತಂತ್ರ್ಯ ನೀಡಿದೆ.ಇದರಿಂದಪ್ರೀಮಿಯಂ ಸ್ಪಿರಿಟ್ಸ್‌,ಕ್ರಾಫ್ಟ್‌ಬಿಯರ್‌ ಹಾಗೂ ಹೊಸ ಬಗೆಯ ಪಾನೀಯಅನುಭವಗಳಿಗೆ ರಾಜ್ಯ ಪ್ರಮುಖಪರೀಕ್ಷಾ ವೇದಿಕೆಯಾಗಿದೆ ಎಂದುಆಯೋಜಕರು ತಿಳಿಸಿದ್ದಾರೆ.

ಪಿಡಿಎವೆಂಚರ್ಸ್​ನ ಪ್ರದೀಪ್ ದೇವಯ್ಯಅವರ ಪ್ರಕಾರ,ಉದ್ಯಮದವಿವಿಧ ಕ್ಷೇತ್ರಗಳ ಪ್ರಮುಖರುಒಂದೇ ವೇದಿಕೆಯಲ್ಲಿ ಸೇರಿ ವಿಚಾರವಿನಿಮಯ ಹಾಗೂ ಸಹಯೋಗದ ಮೂಲಕನವೀನತೆಗೆ ಉತ್ತೇಜನ ನೀಡುವುದುಎಕ್ಸ್‌ಪೋದ ಉದ್ದೇಶ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net