

ಪ್ರಮುಖ ಮುಖ್ಯಾಂಶಗಳು
ಪ್ರಶಾಂತರಿಪ್ಪನ್ಪೇಟೆ, ಬೆಂಗಳೂರು : ಬೆಂಗಳೂರುಪೂರ್ವ ರೈಲ್ವೇ ನಿಲ್ದಾಣದಲ್ಲಿಕಳೆದೊಂದು ವರ್ಷದಿಂದ ಅಭಿವೃದ್ಧಿಕಾಮಗಾರಿ ನಡೆಯುತ್ತಿದ್ದು, ಈವರೆಗೆಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿಪ್ರಯಾಣಿಕರ ಉಪಯೋಗಕ್ಕೆಬಾರದಂತಾಗಿದೆ. ಇತ್ತೀಚೆಗೆಇಲಾಖೆಯು ಮೇ 25ರಿಂದರೈಲ್ವೇ ನಿಲ್ದಾಣ ಪುನರ್ ಕಾರ್ಯಾರಂಭಮಾಡಿದ್ದು, ಕೇವಲನಾಮಕಾವಸ್ತೆ ರೀಓಪನ್ ಆಗಿರುವುದುವಿಜಯವಾಣಿ ರಿಯಾಲಿಟಿ ಚೆಕ್‌ನಲ್ಲಿತಿಳಿದು ಬಂದಿದೆ.
ಸಾರ್ವಜನಿಕಸಾರಿಗೆಯಲ್ಲಿ ಪ್ರಮುಖವಾಗಿರುವಭಾರತೀಯ ರೈಲ್ವೇ ದೇಶದ ಉದ್ದಗಲಕ್ಕೂತನ್ನ ಸಂಪರ್ಕ ಜಾಲವನ್ನುಹೊಂದಿದೆ. ಮಹಾನಗರಗಳಲ್ಲಿಪ್ರಧಾನ ನಿಲ್ದಾಣದ ಒತ್ತಡವನ್ನುತಗ್ಗಿಸುವ ಉದ್ದೇಶದಿಂದಅಕ್ಕಪಕ್ಕದಲ್ಲಿರುವ ಸಣ್ಣಪುಟ್ಟನಿಲ್ದಾಣಗಳನ್ನು ಉನ್ನತೀಕರಿಸುವಕಾರ್ಯ ಕೈಗೆತ್ತಿಕೊಂಡಿದೆ.
ಪೂರ್ವರೈಲ್ವೇ ನಿಲ್ದಾಣದಲ್ಲಿ ಒಟ್ಟುನಾಲ್ಕು ಹಳಿಗಳಿದ್ದು, ಎರಡುಪ್ಲಾಟ್‌ಫಾರ್ಮ್‌ಗಳಿವೆ. ಇದರಲ್ಲಿ 1ನೇಪ್ಲಾಟ್‌ಫಾರ್ಮ್ ಕಾಮಗಾರಿ ಬಹುತೇಕಪೂರ್ಣಗೊಂಡಿದ್ದು, ಇದೊಂದೇಪ್ಲಾಟ್‌ಾರ್ಮ್‌ನಲ್ಲಿ ಪ್ರಯಾಣಿಕರುಹತ್ತುವ ಮತ್ತು ಇಳಿಯುವುದಕ್ಕೆಅವಕಾಶವಿದೆ.2ನೇಪ್ಲಾಟ್‌ಫಾರ್ಮ್ ಕಾಮಗಾರಿ ಇನ್ನೂಪ್ರಗತಿಯಲ್ಲಿದೆ. ನಡುವೆಇರುವ ಎರಡು ಹಳಿಗಳು ಎಕ್ಸ್‌ಪ್ರೆಸ್ರೈಲುಗಳು ಮತ್ತು ಗೂಡ್ಸ್ ರೈಲುಗಳಸಂಚಾರಕ್ಕೆ ಸಮೀತವಾಗಿವೆ. ಸದ್ಯ 1ನೇಪ್ಲಾಟ್‌ಫಾರ್ಮ್‌ನಲ್ಲಿ ಮಾತ್ರಮೆಮು ಮತ್ತಿತರ ರೈಲುಗಳುನಿಲುಗಡೆಯಾಗುತ್ತಿವೆ. ಆದರೆಕ್ರಾಂತಿವೀರ ಸಂಗೊಳ್ಳಿ ರಾಯಣ್ಣರೈಲ್ವೇ ನಿಲ್ದಾಣದಿಂದ ದಂಡುನಿಲ್ದಾಣದ ಮಾರ್ಗವಾಗಿ ಬರುವರೈಲುಗಳು ನಿಲುಗಡೆಯಾಗಲುಪ್ಲಾಟ್‌ಾರ್ಮ್ ಇಲ್ಲದಿರುವುದರಿಂದಕೋಲಾರ, ಚೆನ್ನೈ, ಹೈದ್ರಾಬಾದ್, ದೆಹಲಿಕಡೆ ಹೋಗುವ ರೈಲುಗಳಿಗೆ ಹೋಗುವಪ್ರಯಾಣಿಕರು ಪರದಾಡುವಂತಾಗಿದೆ. ನಿಲ್ದಾಣರೀಓಪನ್ ಆಗಿದ್ದರೂ ಕೂಡಾ ಕೇವಲಕೆಎಸ್‌ಆರ್ ಮಾರ್ಗವಾಗಿರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಮೈಸೂರುಹಾಗೂ ಚಾಮರಾಜನಗರದವರೆಗಿನಟಿಕೆಟ್‌ಗಳನ್ನು ಮಾತ್ರ ಇಲ್ಲಿನೀಡಲಾಗುತ್ತಿದೆ. ಇನ್ನುಳಿದಂತೆಬುಕ್ಕಿಂಗ್ ಕೌಂಟರ್ ಒಂದು ಕಾರ್ಯನಿರ್ವಹಿಸುತ್ತಿದ್ದು, ತತ್ಕಾಲ್ಮತ್ತು ಸಾಮಾನ್ಯ ಟಿಕಟ್ ಬುಕ್ಕಿಂಗ್ಮಾಡಲು ಪ್ರಯಾಣಿಕರಿಗೆ ಅವಕಾಶವಿದೆ.
ಈಹಿಂದೆ ಬೆಂಗಳೂರು ಪೂರ್ವ ರೈಲ್ವೇನಿಲ್ದಾಣವು ಸಾರ್ವಜನಿಕರಿಗೆಸೇವೆಯನ್ನು ಒದಗಿಸುತ್ತಿತ್ತು. ಆದರೆಸದ್ಯ ಕಾಮಗಾರಿ ಕಾರಣಕ್ಕಾಗಿರೈಲುಗಳ ನಿಲುಗಡೆಯನ್ನುರದ್ದುಪಡಿಸಲಾಗಿದ್ದು, ಪ್ರಯಾಣಿಕರಿಗೆಇದರಿಂದ ಬಹಳಅನಾನುಕೂಲವಾಗಿದೆ. ಚೆನೈ, ಹೈದ್ರಾಬಾದ್, ಅನಂತಪುರ, ಕಲಬುರಗಿ, ದೆಹಲಿಸೇರಿದಂತೆ ಪ್ರಮುಖ ನಗರಗಳಿಗೆಹೋಗುವ ರೈಲುಗಳು ಈ ಮಾರ್ಗವಾಗಿಯೇಸಂಚರಿಸುವುದರಿಂದ ಹೋಗುವ ಮತ್ತುಬಂದಿಳಿಯುವ ಪ್ರಯಾಣಿಕರ ಸಂಖ್ಯೆಹೆಚ್ಚಾಗಿದೆ. ಈನಿಲ್ದಾಣ ಪೂರ್ಣ ಪ್ರಮಾಣದಲ್ಲಿಕಾರ್ಯಾರಂಭ ಮಾಡದ ಹಿನ್ನೆಲೆಯಲ್ಲಿಪ್ರಯಾಣಿಕರು ಕಂಟೋನ್ಮೆಂಟ್ನಿಲ್ದಾಣ ಅಥವಾ ಬೆಂಗಳೂರು ಸಿಟಿರೈಲ್ವೇ ನಿಲ್ದಾಣಕ್ಕೆ ಹೋಗಿರೈಲು ಹತ್ತುವುದು ಅಥವಾ ಇಳಿಯುವುದುಮಾಡಬೇಕಾಗಿದೆ. ಅಕ್ಕಪಕ್ಕದಜಿಲ್ಲೆಯಿಂದ ಉದ್ಯೋಗಕ್ಕಾಗಿಬಂದು ನೆಲೆಸಿದ ಬಡ ಮತ್ತು ಮಧ್ಯಮವರ್ಗದ ಜನರು ಈ ಭಾಗದಲ್ಲಿನೆಲೆಸಿರುವುದರಿಂದ ಬೆಂಗಳೂರುಪೂರ್ವ ರೈಲು ನಿಲ್ದಾಣದ ಅವಶ್ಯಕತೆಹೆಚ್ಚಾಗಿದೆ.
1ನೇಪ್ಲಾಟ್‌ಫಾರ್ಮ್ ಕಾಮಗಾರಿ ಬಹುತೇಕಮುಕ್ತಾಯವಾಗಿದೆಯಾದರೂ, ಇನ್ನೂಒಂದು ಶೆಲ್ಟರ್ ಅಳವಡಿಕೆ, ಕುಡಿಯುವನೀರಿನ ವ್ಯವಸ್ಥೆ, ಅಂಗವಿಕಲರರಾಂಪ್, ಪ್ರಯಾಣಿಕರನಿರೀಕ್ಷಣ ಕೊಠಡಿ, ಇನ್ನೊಂದುಬುಕ್ಕಿಂಗ್ ಮತ್ತು ಟಿಕೆಟ್ ಕೌಂಟರ್ಕಾರ್ಯ ಪ್ರಗತಿಯಲ್ಲಿದೆ. ನಿಲ್ದಾಣಕ್ಕೆಈಗಿರುವ ಹೊಸ ಪ್ರವೇಶದ್ವಾರ ಮತ್ತುಪಾರ್ಕಿಂಗ್ ಕಾಮಗಾರಿ ಕೂಡಾನಡೆಯುತ್ತಿದೆ.
2ನೇಪ್ಲಾಟ್‌ಫಾರ್ಮ್ ಕಾಮಗಾರಿಶೇ.60ರಷ್ಟುಬಾಕಿ ಇದ್ದು, ಶೆಲ್ಟರ್‌ಗಳಅಳವಡಿಕೆ ಮತ್ತಿತರ ಮೂಲಭೂತವ್ಯವಸ್ಥೆಗಳು ಇನ್ನಷ್ಟೆಆಗಬೇಕಿದೆ. ನಾಲ್ಕುಹಳಿಗಳಲ್ಲಿ ಎರಡು ಹಳಿಗಳ ನಡುವೆಬೇಲಿ ಹಾಕುವ ಅಗತ್ಯವಿದೆ. ಇಲ್ಲದಿದ್ದರೆಪ್ರಯಾಣಿಕರು ಹಳಿಗಳ ನಡುವೆಯೇದಾಟುವ ಸಾಧ್ಯತೆ ಇದ್ದು ಇದುಅಪಾಯಕಾರಿ.
ಸದ್ಯಕಾಮಗಾರಿ ನಡೆಯುತ್ತಿರುವ ವೇಗಮತ್ತು ಕಾರ್ಮಿಕರ ಸಂಖ್ಯೆಯನ್ನುಗಮನಿಸಿದರೆ ಇನ್ನೂ ಕೆಲ ತಿಂಗಳುಗಳಕಾಲ ಕಾಮಗಾರಿ ಪೂರ್ಣಗೊಳ್ಳುವಲಕ್ಷಣಗಳಿಲ್ಲ.
ಈಗಾಗಲೇ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಕೆಲವು ರೈಲುಗಳ ನಿಲುಗಡೆ ಆರಂಭವಾಗಿದೆ. ಆದಷ್ಟು ಬೇಗ ಬಾಕಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ. ಆಗ ರೈಲು ನಿಲ್ದಾಣವು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದರಿಂದ ಸಿಟಿ ನಿಲ್ದಾಣದ ಒತ್ತಡ ಕೊಂಚಮಟ್ಟಿಗೆ ತಗ್ಗಲಿದೆ.
ಸುತ್ತಮುತ್ತ ಕೋಲಾರ, ಕೆಜಿಎ್, ಮಾಲೂರು ಮತ್ತಿತರ ಕಡೆಗಳಿಂದ ಬಂದು ನೆಲೆಸಿರುವ ಬಡವರು ಹೆಚ್ಚಾಗಿ ವಾಸ ಮಾಡುತ್ತಾರೆ. ಈ ರೈಲ್ವೇ ನಿಲ್ದಾಣ ಬಡವರಿಗೆ ಬಹಳ ಅಗತ್ಯವಿದೆ. ಇದನ್ನು ಆದಷ್ಟು ಬೇಗ ಪೂರ್ಣ ಪ್ರಮಾಣದಲ್ಲಿ ಓಪನ್ ಮಾಡಿದರೆ ಬಡವರಿಗೆ ಬಹಳ ಉಪಕಾರವಾಗುತ್ತದೆ.