ಪ್ರತಿ ಮದ್ಯದಂಗಡಿಯಲ್ಲಿ ವಾರಕ್ಕೆ ಇಂತಿಷ್ಟು ಬಾಕ್ಸ್ ಸೇಲ್‌ವಾಗುವಂತೆ ಮೇಲಾಧಿಕಾರಿಗಳು, ಕೆಳಹಂತದ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ‘ಟಾರ್ಗೆಟ್ ಸಂಸ್ಕೃತಿ’ದಿಂದ ಅಬಕಾರಿ ಆಯುಕ್ತ, ಅಧೀಕ್ಷಕ, ಉಪ ಆಧೀಕ್ಷಕ, ನಿರೀಕ್ಷಕ, ಉಪ ನಿರೀಕ್ಷಕ, ಮುಖ್ಯ ಪೇದೆ ಮತ್ತು ಪೇದೆಗಳು ರೋಸಿ ಹೋಗಿದ್ದಾರೆ. ಅನಧಿಕೃತ ಮದ್ಯ ಮಾರಾಟ ಹೆಸರಿನಲ್ಲಿ ಮದ್ಯದಂಗಡಿಗಳ ವಿರುದ್ಧ ಸುಳ್ಳು ಕೇಸ್ ದಾಖಲಿಸುವಂತೆ ಕೆಳಹಂತದ ಅಧಿಕಾರಿಗಳಿಗೆ ಟಾರ್ಗೆಟ್ ನೀಡಲಾಗುತ್ತಿದೆ. ಪ್ರತಿ ಬಾರಿ ಮೀಟಿಂಗ್‌ನಲ್ಲಿ ಕಡಿಮೆ ಕೇಸ್ ದಾಖಲಿಸುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುತ್ತಿದೆ.