ಪರಿಣಾಮಕಾರಿ ಭೋದನೆಗೆ ಒತ್ತು ನೀಡಿ: ಸುರೇಂದ್ರ ಚೌಗಲಾ

ಚಿಕ್ಕೋಡಿ ಚೌಸನ್ ಕಾಲೇಜಿನಲ್ಲಿ ಎಐ ಕುರಿತು ಕಾರ್ಯಾಗಾರ
ಚಿಕ್ಕೋಡಿ ಚೌಸನ್ ಕಾಲೇಜಿನಲ್ಲಿ ಎಐ ಕುರಿತು ಕಾರ್ಯಾಗಾರ
Published on

ಪ್ರಮುಖ ಮುಖ್ಯಾಂಶಗಳು

  • ಚೌಸನ್ ಕಾಲೇಜಿನಲ್ಲಿ ಎಐ ಕುರಿತು ಕಾರ್ಯಾಗಾರ
  • ಚಿಕ್ಕೋಡಿ ಪಟ್ಟಣದ ಚೌಸನ್ ಶಿಕ್ಷಣ ಮಹಾವಿದ್ಯಾಲಯ
  • ಅಧ್ಯಕ್ಷ ಸುರೇಂದ್ರನಾಥ ಚೌಗಲಾ ಭಾಗಿ

ಪರಿಣಾಮಕಾರಿ ಭೋದನೆಗೆ ಒತ್ತು ನೀಡಿ
| ಅಧ್ಯಕ್ಷ ಸುರೇಂದ್ರನಾಥ್ ಚೌಗುಲೆ ಸಲಹೆ | ಕಾರ್ಯಾಗಾರ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕಾ ವಿಧಾನ ವಿಭಿನ್ನವಾಗಿದ್ದು ಭಾಷಾ ತಾರ್ಕಿಕತೆ ಪ್ರಕೃತಿ ಬುದ್ಧಿಮತ್ತೆಯನ್ನು ಗುರುತಿಸಿ ಅದಕ್ಕೆ ಅನುಗುಣವಾದ ಬೋಧನಾ ವಿಧಾನಗಳನ್ನು ಶಿಕ್ಷಕರು ಅನುಸರಿಸಬೇಕು. ಕೃತಕ ಬುದ್ಧಿಮತ್ತೆಯನ್ನು(ಎಐ) ಪರ್ಯಾಯವಾಗಿ ನೋಡದೆ ಪರಿಣಾಮಕಾರಿ ಬೋಧನಾ ಸಹಾಯಕ ಸಾಧನವಾಗಿ ಬಳಸಬೇಕು ಎಂದು ಚೌಸನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಂದ್ರನಾಥ್ ಚೌಗುಲೆ ಸಲಹೆ ನೀಡಿದರು.
ಪಟ್ಟಣದ ಚೌಸನ್ ಶಿಕ್ಷಣ ಮಹಾವಿದ್ಯಾಲಯದ ಈಚೆಗೆ ನಡೆದ ಕೃತಕ ಬುದ್ಧಿಮತ್ತೆ ಯುಗದಲ್ಲಿ ಶಿಕ್ಷಕರ ಪಾತ್ರಕ್ಕೆ ಹೊಸ ಆಯಾಮ ಗಾರ್ಡನ್‌ರ್ ಬಹು ಬುದ್ಧಿಮತ್ತೆ ಸಿದ್ಧಾಂತ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಧುನಿಕ ಶಿಕ್ಷಣ ಮೌಲ್ಯಗಳ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವುಗಳಲ್ಲಿ.
ಶಿಕ್ಷಣವು ಕೇವಲ ಪರೀಕ್ಷಾ ಕೇಂದ್ರಿತವಾಗಿರದೆ ಜೀವನ ಕೌಶಲ, ಪೂರಕ ಮನೋಭಾವ ,ಸೃಜನಶೀಲತೆ ,ಸಾಮಾಜಿಕ ನ್ಯಾಯ ಮತ್ತು ಸಂವಿಧಾನಿಕ ಮೌಲ್ಯ ಬೆಳೆಸುವ ಸಾಧನವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ.ತನುಜಾ ಕುಮಾರ ಮಾತನಾಡಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಶಿಕ್ಷಣ ತತ್ವಗಳು ಇಂದಿನ ಶಿಕ್ಷಣ ವ್ಯವಸ್ಥೆಗೆ ದಾರಿದೀಪ ಎಂದರು.
ಚೌಸನ್ ನರ್ಸರಿ ಶಾಲೆಯ ನಿರ್ದೇಶಕಿ ಸವಿತಾ ಹೆಗಡೆ , ಶಕುಂತಲಾ ಚೌಗುಲೆ, ಪ್ರಾಧ್ಯಾಪಕ ಡಾ.ಎನ್.ಎಸ್.ಶಿಂಧೆ, ಪ್ರೊ.ಶ್ರೀಧರ್ ಅಲ್ಕೆ, ಎಂ.ಎಚ್.ರಾವುತ, ಪ್ರಶಾಂತ ಪತ್ತಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net