ಗ್ರಾಪಂಗಳಲ್ಲಿ ವಾಟರ್ ಮನ್ಗಳಿಂದ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಸರಿಯಾಗಿ ಕೆಲಸ ಮಾಡದ ವಾಟರ್ ಮನ್ಗಳನ್ನು ತೆಗೆದು ಹಾಕುವಂತೆ ತಾಪಂ ಇಒಗೆ ಸೂಚನೆ ನೀಡಿದ ಶಾಸಕರು, ಗ್ರಾಮಾಂತರ ಪ್ರದೇಶಗಳಲ್ಲಿ ಜೆಜೆಎಂನಿಂದ ರಸ್ತೆಗಳು ಹಾಳಾಗಿದ್ದು, ಶೀಘ್ರ ಸರಿಪಡಿಸಬೇಕು. ಬರಗಾಲದ ಹಿನ್ನೆಲೆಯಲ್ಲಿ ಎನ್ಆರ್ಇಜಿ ಕಾಮಗಾರಿ ಶೀಘ್ರ ಪ್ರಾರಂಭ ಮಾಡುವಂತೆ ಹಾಗೂ ಇದುವರೆಗೂ ಅಂದಾಜು ಪಟ್ಟಿ ತಯಾರಿಸದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಬೇರೆ ಜಿಲ್ಲೆಗಳಲ್ಲಿ ಎನ್ಆರ್ಇಜಿ ಪ್ರಾರಂಭವಾಗಿದ್ದು, ನಮ್ಮಲ್ಲಿ ಏಕೆ ಪ್ರಾರಂಭವಾಗಿಲ್ಲ ಎಂದು ಶಾಸಕ ಕೆ.ಎನ್ ರಾಜಣ್ಣ ಪ್ರಶ್ನಿಸಿದರು.