ವಂಚಕರಿಂದ ಜಾಗರೂಕರಾಗಿರಿ scammers

ವಂಚಕರಿಂದ ಜಾಗರೂಕರಾಗಿರಿ scammers
ವಂಚಕರಿಂದ ಜಾಗರೂಕರಾಗಿರಿ scammers
Published on
ಬೂದಿಕೋಟೆ: ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಸಂಭವಿಸುತ್ತಿರುವ ಅಪರಾಧಗಳ ಸ್ವರೂಪ ನೋಡಿದರೆ ಸಾರ್ವಜನಿಕರು ಹೆಚ್ಚು ಜಾಗರೂಕರಾಗಿರಬೇಕು ಎಂದು ಬೂದಿಕೋಟೆ ಪಿಎಸ್​ಐ ಗುರುರಾಜ್​ ಚಿಂತಕಲ್​ ಹೇಳಿದರು.scammers
ಬಂಗಾರಪೇಟೆ ತಾಲೂಕು ಬೂದಿಕೋಟೆ ಪೊಲೀಸ್​ ಠಾಣಾ ವ್ಯಾಪ್ತಿಯ ಕಾರಮಾನಹಳ್ಳಿಯಲ್ಲಿ ಪೊಲೀಸ್​ ಇಲಾಖೆಯಿಂದ ಹಮ್ಮಿಕೊಂಡಿದ್ದ ಜನಸಂಪರ್ಕ ಮತ್ತು ಬೀಟ್​ ಸಭೆಯಲ್ಲಿ ಮಾತನಾಡಿ, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್​ ಧರಿಸಬೇಕು. ಅಪ್ರಾಪ್ತಗೆ ಯಾವುದೇ ಕಾರಣಕ್ಕೂ ವಾಹನ ಚಾಲನೆ ಮಾಡಲು ಅವಕಾಶ ನೀಡಬಾರದು. ಅತಿವೇಗ ಹಾಗೂ ಬೇಜವಾಬ್ದಾರಿ ಚಾಲನೆಯೇ ರಸ್ತೆ ಅಪಘಾತಗಳಿಗೆ ಕಾರಣ. ಹಾಗಾಗಿ ನಿಯಮ ಪಾಲನೆ ಮಾಡುವ ಮೂಲಕ ಪ್ರಾಣಹಾನಿ ತಪ್ಪಿಸಬಹುದು ಎಂದರು.
ಇಂರ್ಟನೆಟ್​ ಹಾಗೂ ಅತಿಯಾದ ಮೊಬೈಲ್​ ಬಳಕೆಯಿಂದ ಸೈಬರ್​ ವಂಚನೆಗಳು ಹೆಚ್ಚಾಗುತ್ತಿವೆ. ಅತಿ ಕಡಿಮೆ ದರದಲ್ಲಿ ಲೋನ್​ ನೀಡಲಾಗುವುದು ಎಂಬ ನಕಲಿ ಆಮಿಷಗಳಿಗೆ ಬಲಿಯಾಗಬಾರದು. ಬ್ಯಾಂಕ್​ ಖಾತೆ ವಿವರ, ಒಟಿಪಿ ಯಾರಿಗೂ ಹಂಚಿಕೊಳ್ಳಬಾರದು. ವಂಚನೆಗೊಳಗಾದರೆ ತಕ್ಷಣ 1930 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬೇಕೆಂದು ತಿಳಿಸಿದರು.
ಮಾದಕ ವಸ್ತುಗಳ ಬಳಕೆಯು ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿದೆ. ಇದು ಕೇವಲ ಒಬ್ಬ ವ್ಯಕ್ತಿಯ ಆರೋಗ್ಯದ ಮೇಲಷ್ಟೇ ಅಲ್ಲದೆ, ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಹೆತ್ತವರು ತಮ್ಮ ಮಕ್ಕಳ ನಡವಳಿಕೆಯ ಮೇಲೆ ನಿಗಾ ಇಡಬೇಕು. ಗ್ರಾಮದಲ್ಲಿ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net