ಮತದಾನದ ಹಕ್ಕು ಹೋದರೆ ಪಂಚ ಗ್ಯಾರಂಟಿ ಯೋಜನೆ, ಪಿಂಚಣಿ, ಸ್ಕಾಲರ್ಶಿಪ್ ಸೇರಿ ಸರ್ಕಾರದ ಅನೇಕ ಯೋಜನೆಗಳಿಂದ ವಂಚಿತರಾಗಬೇಕಾಗುತ್ತದೆ. ಕ್ಷೇತ್ರದಲ್ಲಿನ ಮತದಾರರು ಅಧಿಕಾರಿಗಳಿಗೆ ಸಮಗ್ರ ಮಾಹಿತಿ ನೀಡಬೇಕು. ಪದ ಬಿಎಲ್ಒಗಳು ಮನೆ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ತಿಳುವಳಿಕೆ ನೀಡಬೇಕು. ಮತದಾರರ ಪಟ್ಟಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವ ಹಾಗೆ ಮನವೊಲಿಸಬೇಕು ಎಂದು ಹೇಳಿದರು.