ಬಿಡಿಸಿಸಿ ವಿವಿಧ ಹುದ್ದೆಗೆ ನೇಮಕಾತಿ ಶೀಘ್ರ: ಜೊಲ್ಲೆ ಸ್ಪಷ್ಟನೆ

ಬಿಡಿಸಿಸಿ ಬ್ಯಾಂಕ್ ಹುದ್ದೆ ನೇಮಕಾತಿ ಶೀಘ್ರ
ಬಿಡಿಸಿಸಿ ಬ್ಯಾಂಕ್ ಹುದ್ದೆ ನೇಮಕಾತಿ ಶೀಘ್ರ
Published on

ಪ್ರಮುಖ ಮುಖ್ಯಾಂಶಗಳು

  • ಬಿಡಿಸಿಸಿ ಬ್ಯಾಂಕ್ ಹುದ್ದೆ ನೇಮಕಾತಿ ಶೀಘ್ರ
  • ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಮಾಹಿತಿ
  • 140 ಹುದ್ದೆ ಭರ್ತಿ ಪ್ರಕ್ರಿಯೆ ನಡೆಯಲಿದೆ
ಬಿಡಿಸಿಸಿ ಬ್ಯಾಂಕಿನ ವಿವಿಧ ಹುದ್ದೆಗಳಿಗೆ ಶೀಘ್ರವೇ ನೇಮಕಾತಿ
ಚಿಕ್ಕೋಡಿ:

ಬೆಳಗಾವಿ ಜಿಲ್ಲಾ ಕೇಂದ್ರ ಮಧ್ಯವರ್ತಿ ಬ್ಯಾಂಕಿನ (ಬಿಡಿಸಿಸಿ)ವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಸಹಕಾರ ಇಲಾಖೆ ಸೂಚನೆಯಂತೆ ಮುಂದೂಡಲ್ಪಟ್ಟಿದೆ, ನೇಮಕಾತಿ ನಿಮಯಗಳ ಪ್ರಕಾರ ಶೀಘ್ರವೇ ನೇಮಕಾತಿ ಪ್ರಾರಂಭವಾಗಲಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಸ್ಪಷ್ಟನೆ ನೀಡಿದೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಈ ಹಿಂದೆ ಬ್ಯಾಂಕಿನ ವಿವಿಧ 104 ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದೆ.ಆದರೆ ಇದೀಗ ನಿಯಮಾನುಸಾರ 140 ಹುದ್ದೆಗಳಿಗೆ ನೇಮಕಾತಿ.ಹೊಸ ನೇಮಕಾತಿಯಲ್ಲಿ ಮಹಿಳಾ ಮೀಸಲಾತಿ, ಒಳ ಜಾತಿ ಮೀಸಲಾತಿ ಸೇರಿದಂತೆ ಎಲ್ಲ ಪದವಿದಾರರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು. ಈ ಹಿಂದೆ ೧೦೪ ಹುದ್ಧೆಗಳಿಗೆ ೨೧ ಸಾವಿರ ಅರ್ಜಿ ಸಲ್ಲಿಕೆಯಾಗಿತ್ತು.ಹೊಸ ನೇಮಕಾತಿಯಲ್ಲಿ ಈ ಹಿಂದೆ ಸಲ್ಲಿಸಿದ ಅರ್ಜಿಗಳನ್ನು ಮಾನ್ಯ ಮಾಡಲಾಗುವುದು.ಮೊದಲು ಅರ್ಜಿ ಸಲ್ಲಿಸಿದವರು ಅರ್ಜಿ ಸಲ್ಲಿಸಲು ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net