ಬಸವೇಶ್ವರನಗರ ಪತ್ರಿಕಾ ವಿತರಕರ ಸಂಘ ಉದ್ಘಾಟನೆ; ಕನ್ನಡ ರಾಜ್ಯೋತ್ಸವ ಆಚರಣೆ

ಬಸವೇಶ್ವರನಗರ ಪತ್ರಿಕಾ ವಿತರಕರ ಸಂಘದ ಕಚೇರಿಯನ್ನು ಮಾಜಿ ಉಪ ಮಹಾಪೌರ ಆರ್.ಹರೀಶ್ ಉದ್ಘಾಟಿಸಿದರು. ಹಿರಿಯ ಪತ್ರಕರ್ತ ಬಿವಿಎಂ ಮಲ್ಲಿಕಾರ್ಜುನ್, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಸವೇಶ್ವರನಗರ ಪತ್ರಿಕಾ ವಿತರಕರ ಸಂಘದ ಕಚೇರಿಯನ್ನು ಮಾಜಿ ಉಪ ಮಹಾಪೌರ ಆರ್.ಹರೀಶ್ ಉದ್ಘಾಟಿಸಿದರು. ಹಿರಿಯ ಪತ್ರಕರ್ತ ಬಿವಿಎಂ ಮಲ್ಲಿಕಾರ್ಜುನ್, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ
  • ಬಸವೇಶ್ವರನಗರ ಸಂಘದ ಉದ್ಘಾಟನೆ
  • ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಬೆಂಗಳೂರು:ಕರ್ನಾಟಕ ರಾಜ್ಯಪತ್ರಿಕಾ ವಿತರಕರ ಒಕ್ಕೂಟ ಹಾಗೂಬಸವೇಶ್ವರನಗರ ಪತ್ರಿಕಾ ವಿತರಕರಸಂಘದ ಸಂಯುಕ್ತಾಶ್ರಯದಲ್ಲಿ ನಡೆದಬಸವೇಶ್ವರನಗರ ಸಂಘದ ಉದ್ಘಾಟನೆಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಮಹಾಲಕ್ಷ್ಮಿಪುರಂ ಶಾಸಕರ ಕಚೇರಿಸಭಾಂಗಣದಲ್ಲಿ ನಡೆಯಿತು.

ಕಚೇರಿನಾಮಫಲಕ ಉದ್ಘಾಟಿಸಿ ಮಾತನಾಡಿದಮಾಜಿ ಉಪ ಮಹಾಪೌರರಾದ ಆರ್.ಹರೀಶ್,ಪತ್ರಿಕಾ ವಿತರಕರಿಗೆಸೌಲಭ್ಯಗಳನ್ನು ಕಲ್ಪಿಸುವುದಕ್ಕೆಸಂಬಂಧಪಟ್ಟಂತೆ ನಾವು ಸದಾ ಪತ್ರಿಕಾವಿತರಕರ ಜೊತೆ ಇರುತ್ತೇವೆ ಎಂದರು.

ಇದೇವೇಳೆ ಮಾತನಾಡಿದ ಐಎಫ್‌ಡಬ್ಲ್ಯೂಜೆಅಧ್ಯಕ್ಷ ಬಿವಿಎಂ ಮಲ್ಲಿಕಾರ್ಜುನ್ಮಾತನಾಡಿ, ಪತ್ರಿಕಾವಿತರಕರು ಒಗ್ಗಟ್ಟಾಗಿ ಸೌಲಭ್ಯಗಳನ್ನುಪಡೆದುಕೊಳ್ಳಬೇಕೆಂದು ಕರೆನೀಡಿದರು. ಪತ್ರಿಕಾವಿತರಕರಿಗೆ ವಸತಿ ಯೋಜನೆ ಹಾಗೂಆರೋಗ್ಯ ಕ್ಷೇಮನಿಧಿಗಾಗಿ ತಮ್ಮಲ್ಲೇಪ್ರತಿ ತಿಂಗಳು ಹಣ ಕ್ರೂಢೀಕರಿಸಿಎಂದು ಸಲಹೆ ನೀಡಿದರು.

ಕರ್ನಾಟಕರಾಜ್ಯ ಪತ್ರಿಕಾ ವಿತರಕರ ಒಕ್ಕೂಟದರಾಜ್ಯಾಧ್ಯಕ್ಷ ಶಂಭುಲಿಂಗಮಾತನಾಡಿ, ಪತ್ರಿಕಾವಿತರಕರು ಅಗಲಿದ ಸಂದರ್ಭದಲ್ಲಿರಾಜ್ಯದ ಯಾವುದೇ ಮೂಲೆಗಳಲ್ಲಾದರೂಸರಿ ಅವರ ಕುಟುಂಬಗಳಿಗೆ 5ಲಕ್ಷ ಪರಿಹಾರಸರ್ಕಾರ ನೀಡಬೇಕು.70 ವರ್ಷ ಮೇಲ್ಪಟ್ಟವಿತರಕರಿಗೆ ಪಿಂಚಣಿ ಸೌಲಭ್ಯದೊರಕಿಸಿ ಕೊಡಬೇಕು.ಪತ್ರಿಕಾ ವಿತರಕರಸಂಕಷ್ಠಗಳ ಬಗ್ಗೆ ಪ್ರಧಾನಮಂತ್ರಿಗಳುಮನ್ ಕಿ ಬಾತ್‌ನಲ್ಲಿ ತಿಳಿಸಬೇಕುಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಪಡೆದ ನಾಗರಾಜ್ ನಾದೂರು ವಾಸುದೇವಅವರನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿಪತ್ರಿಕಾ ವಿತರಕ ಒಕ್ಕೂಟದ ಪ್ರಶಾಂತ್ಕುಮಾರ್, ಸಂಗಮಸುರೇಶ್, ಜಗದೀಶ್ಎನ್. ಸುರೇಶ್,ಚೆಲುವರಾಜ್ಹನುಮಂತರಾಜು, ವೀರಭದ್ರ,ಗೋಪಾಲ್ ಎಂ.ಟಿ.,ಮಂಜುನಾಥ್ನಾರಾಯಣಪ್ಪ,ಬಸವರಾಜು ಮತ್ತಿತರರುಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net